Friday, September 30, 2022

Latest Posts

ಪ್ರಾಕ್ಟೀಸ್‌ ಸೆಷನ್‌ ನಲ್ಲಿ ‘ಮ್ಯಾಕ್ಸ್‌ವೆಲ್ ಮೋಡ್’ ಗೆ ತಿರುಗಿದ ಕೊಹ್ಲಿ! ವಿರಾಟ್‌ ಅಬ್ಬರಕ್ಕೆ ದಂಗಾದ ಬೌಲರ್ಸ್

ಹೊಸಗಂತ ಡಿಜಿಟಲ್‌ ಡೆಸ್ಕ್
ಅಭಿಮಾನಿಗಳ ಕಾತರದಿಂದ ಕಾಯುತ್ತಿರುವ ಏಷ್ಯಾಕಪ್ ಟೂರ್ನಿಗೆ ಇಂದು ಯುಎಇನಲ್ಲಿ ನೆಲದಲ್ಲಿ ಚಾಲನೆ ದೊರಕಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿ ಆಗಲಿವೆ. ಆ.28 ರ ಭಾನುವಾರ ನಡೆಯಲಿರುವ ಬ್ಲಾಕ್‌ ಬಸ್ಟರ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕಾದಾಟ ನಡೆಯಲಿದೆ.
ಈ ಪಂದ್ಯಕ್ಕಾಗಿ ಭಾರತದ ಆಟಗಾರರು ಭರ್ಜರಿ ಅಭ್ಯಾಸ ನಡೆಸಿ ಸಿದ್ಧರಾಗುತ್ತಿದ್ದಾರೆ. ಅದರಲ್ಲಿಯೂ ಫಾರ್ಮ್‌ ಮರಳಿ ಪಡೆಯಲು ಎದುರು ನೋಡುತ್ತಿರುವ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಪ್ರಾಕ್ಟೀಸ್‌ ಸೆಷನ್‌ ನಲ್ಲಿ ಚಿತ್ರವಿಚಿತ್ರ ಶಾಟ್‌ ಗಳನ್ನು ಸಿಡಿಸಿ ಬೌಲರ್‌ ಗಳನ್ನು ದಂಗುಬಡಿಸಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಅನೇಕ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ವಿರಾಮವು ಮತ್ತೆ ಫಾರ್ಮ್‌ ಮರಳಿ ಪಡೆಯಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಸದ್ಯ ಕೊಹ್ಲಿ ಆಟವನ್ನು ನೋಡುತ್ತಿದ್ದರೆ ಭಾರತೀಯ ಬ್ಯಾಟಿಂಗ್ ಶ್ರೇಷ್ಠ  ನೆಟ್ಸ್‌ನಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿದ್ದಾರೆ ಎಂದು ತೋರುತ್ತದೆ. ಎರಡು ಸದಿನದ ಹಿಂದೆ ಯುಎಇಗೆ ಬಂದಿಳಿದ ನಂತರ ಮೊದಲ ಅಭ್ಯಾಸದ ಅವಧಿಯಲ್ಲೇ ಕೊಹ್ಲಿ ಭಾರತೀಯ ಸ್ಪಿನ್ನರ್‌ಗಳಿಗೆ ಭರ್ಜರಿ ಶಾಟ್ ಗಳನ್ನು ಬಾರಿಸಿ ಆಫರ್ಮ್‌ ಗೆ ಮರಳಿದ್ದ ಸೂಚನೆ ನೀಡಿದ್ದರು.
ಶುಕ್ರವಾರ ನಡೆದ ಮತ್ತೊಂದು ಪ್ರಾಕ್ಟೀಸ್‌ ಸೆಷನ್‌ ನಲ್ಲಿ ಕೊಹ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಬೌಲಿಂಗ್‌ ನಲ್ಲಿ ʼಮ್ಯಾಕ್ಸ್‌ ವೆಲ್‌ ಶಾಟ್‌ ಹೊಡೆದು ಅಭಿಮಾನಿಗಳನ್ನು ಬೆರಗಾಗಿಸಿದ್ದಾರೆ. ಆರ್ಸಿಬಿ ಆಟಗಾರ ಮ್ಯಾಕ್ಸ್‌ ವೆಲ್‌ ಸ್ವಿಚ್‌ ಹಿಟ್‌ ಕ್ರಿಕೆಟ್‌ ಜಗತ್ತಿನಲ್ಲಿ ಫೇಮಸ್. ಚಾಹಲ್ ಅವರ ಫುಲ್-ಟಾಸ್ ಎಸೆತದಲ್ಲಿ ಕೊಹ್ಲಿ ʼಸ್ವಿಚ್ ಹಿಟ್‌ʼ ಸಿಡಿಸಿದರು.


ಈ ಹೊಡೆತವನ್ನು ನಿರೀಕ್ಷಿಸದಿದ್ದ ಚಾಹಲ್‌ ಒಂದರೆ ಕ್ಷಣ ದಂಗಾದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!