ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ದೊಡ್ಡ ಅಪಘಾತ ನಡೆಯುವುದು ತಪ್ಪಿದೆ! ಟ್ಯಾಕ್ಸಿವೇಯಲ್ಲಿ ಏರ್‌ಇಂಡಿಯಾ ವಿಮಾನ ಹಾಗೂ ಇಂಡಿಗೋ ವಿಮಾನಗಳು ಎದುರುಬದುರು ಬಂದು ನಿಂತಿವೆ.
ತಕ್ಷಣವೇ ವಾಯು ಸಂಚಾರ ನಿಯಂತ್ರಣ ಕೇಂದ್ರ ಮಧ್ಯಪ್ರವೇಶಿಸಿಸಿ ಈ ಅಪಘಾತವನ್ನು ತಪ್ಪಿಸಿದೆ. ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಮಾಡುತ್ತಿದ್ದಾರೆ, ಇಂಡಿಗೋ ಟೇಕ್ ಆಫ್ ಆಗುವುದರಲ್ಲಿತ್ತು. ಏರ್ ಇಂಡಿಯಾ ವಿಮಾನದಲ್ಲಿ 164 ಪ್ರಯಾಣಿಕರು ಕೂಡ ಇದ್ದರು.
ಈ ಕುರಿತು ಮಾಹಿತಿ ನೀಡಿದ ಇಂಡಿಗೋ ವಿಮಾನಯಾನ ಸಂಸ್ಥೆ, ಇಂಡಿಗೋ ವಿಮಾನ 6ಇ-5160 ಮುಂಬೈಗೆ ಹೊರಡಲು ಟ್ಯಾಕ್ಸಿ ಮಾಡುತ್ತಿದ್ದಾಗ ಮತ್ತೊಂದು ವಿಮಾನವು ಅದರ ಹಾದಿಗೆ ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಕಾಲ ಎರಡೂ ವಿಮಾನಗಳನ್ನು ನಿಲ್ಲಿಸಲಾಯಿತು. ಬಳಿಕ ವಿಮಾನವು ಸುರಕ್ಷಿತವಾಗಿ ಹೊರಟು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ಸಂಸ್ಥೆಯು, ಜೂನ್ 24 ರಂದು ಮುಂಬೈನಿಂದ ಬಂದಿಳಿದ ವಿಮಾನ ಎಐ-2493 ಲ್ಯಾಂಡಿಂಗ್ ವೇಳೆ ಟ್ಯಾಕ್ಸಿಯಿಂಗ್ ಸಮಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಪ್ರಯಾಣಿಕರು ಅಥವಾ ಸಿಬ್ಬಂದಿ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಕ್ಷಣವೇ ವಾಯುಯಾನ ಸಂಚಾರ ನಿಯಂತ್ರಣ ನಿರ್ದೇಶನಗಳನ್ನು ಅನುಸರಿಸಿ ಸರಿಯಾದ ಬೇಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.



