October 16, 2026
Friday, October 16, 2026
spot_img

‘ಒಳನುಸುಳುವಿಕೆ ನಿಲ್ಲಿಸಲೇಬೇಕು!’ ಗಡಿ ಭದ್ರತೆಗೆ ಕೇಂದ್ರದ ಹೈವೋಲ್ಟೇಜ್ ಪ್ಲಾನ್ ರೆಡಿ ಎಂದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಅಕ್ರಮ ಒಳನುಸುಳುವಿಕೆ ಹಾಗೂ ಅಸಹಜ ಜನಸಂಖ್ಯಾ ಬದಲಾವಣೆಗಳು ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಈ ಸಮಸ್ಯೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ವಿಶೇಷ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಗಡಿಭಾಗಗಳ ಮೇಲೆ ಕೇಂದ್ರದ ಫುಲ್ ಫೋಕಸ್

ದೆಹಲಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಗಡಿ ರಾಜ್ಯಗಳಲ್ಲಿ ಅಕ್ರಮ ವಲಸೆ ಹೆಚ್ಚುತ್ತಿರುವುದು ಕಾನೂನು ಸುವ್ಯವಸ್ಥೆ ಹಾಗೂ ಸಾಮಾಜಿಕ ಸಮತೋಲನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಜನಸಂಖ್ಯಾ ಬದಲಾವಣೆಯ ಅಧ್ಯಯನ

ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆಯ ಅನುಪಾತ ಅಸಹಜವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲು ಸಮಿತಿ ಕಾರ್ಯನಿರ್ವಹಿಸಲಿದೆ. ಗಡಿ ಜಿಲ್ಲೆಗಳ ಡೇಟಾ ಕೂಡ ಪರಿಶೀಲನೆಗೆ ಒಳಪಡಲಿದೆ.

ಇದನ್ನೂ ಓದಿ:

ಡ್ರೋನ್, ಟೆಕ್ನಾಲಜಿ ಮೂಲಕ ಕಣ್ಗಾವಲು

ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಡ್ರೋನ್ ಬಳಕೆ, ಟೆಕ್ನಾಲಜಿ ಆಧಾರಿತ ನಿಗಾವ್ಯವಸ್ಥೆ ಮತ್ತು ಫೆನ್ಸಿಂಗ್ ಕಾಮಗಾರಿ ವೇಗಗೊಳಿಸಲು ಸೂಚನೆ ನೀಡಲಾಗಿದೆ.

ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ

ಯಾವುದೇ ಒತ್ತಡಕ್ಕೆ ಮಣಿಯದೇ ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ಈ ಘೋಷಣೆಯ ಬಳಿಕ ಗಡಿ ರಾಜ್ಯಗಳಲ್ಲಿ ಭಾರೀ ಕಾರ್ಯಾಚರಣೆಯ ಚರ್ಚೆ ಜೋರಾಗಿದೆ.

Must Read