October 12, 2026
Monday, October 12, 2026
spot_img

ಸಂಜೆ ಮಳೆಗೆ ಸಿಲಿಕಾನ್ ಸಿಟಿ ಸ್ಟಕ್: ರಸ್ತೆಗಳು ಜಲಾವೃತ, ಮೆಟ್ರೋ ಸಂಚಾರಕ್ಕೂ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಸಿಲಿಕಾನ್ ಸಿಟಿಗೆ ಮಂಗಳವಾರ ಸಂಜೆ ಭಾರೀ ಮಳೆ ಅಪ್ಪಳಿಸಿತು. ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದ ನಗರದ ಅನೇಕ ಪ್ರದೇಶಗಳು ನೀರಿನಿಂದ ತುಂಬಿ ಹೋಗಿದ್ದು, ಜನರು ಭಾರೀ ಸಂಕಷ್ಟ ಅನುಭವಿಸಿದರು.

ನಗರದ ಹಲವೆಡೆ ಧಾರಾಕಾರ ಮಳೆ

ಶಾಂತಿನಗರ, ಜಯನಗರ, ಕೋರಮಂಗಲ, ವೈಟ್‌ಫೀಲ್ಡ್, ಬೆಳ್ಳಂದೂರು, ಸರ್ಜಾಪುರ, ಕೆ.ಆರ್.ಪುರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು. ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ಟ್ರಾಫಿಕ್ ಗೊಂದಲ ಉಂಟಾಯಿತು.

ಮೆಟ್ರೋ ಸಂಚಾರ ಕೆಲಕಾಲ ಸ್ಥಗಿತ

ಐಟಿಪಿಎಲ್ ಮತ್ತು ಸತ್ಯಸಾಯಿ ಆಸ್ಪತ್ರೆ ನಡುವೆ ಮೆಟ್ರೋ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ವೈಟ್‌ಫೀಲ್ಡ್ ಮಾರ್ಗದ ಮೆಟ್ರೋ ಸಂಚಾರ ಸುಮಾರು 35 ನಿಮಿಷ ಸ್ಥಗಿತಗೊಂಡಿತು. ಇದರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.

ಇದನ್ನೂ ಓದಿ:

ಕೆಆರ್ ಸರ್ಕಲ್ ಅಂಡರ್‌ಪಾಸ್ ಬಂದ್

ಭಾರೀ ಮಳೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್ ಸರ್ಕಲ್ ಅಂಡರ್‌ಪಾಸ್ ಅನ್ನು ಪೊಲೀಸರು ಬಂದ್ ಮಾಡಿದರು. ಜಲಾವೃತ ಭೀತಿಯಿಂದ ವಾಹನ ಸಂಚಾರ ತಡೆಹಿಡಿಯಲಾಯಿತು.

ಹವಾಮಾನ ಇಲಾಖೆಯಿಂದ ಅಲರ್ಟ್

ರಾಜ್ಯದ ಹಲವು ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Must Read