ಐಎನ್‌ಎಸ್‌ ವಿಕ್ರಾಂತ್‌ ಯಶಸ್ಸು ಎಲ್ಲಾ ಸರ್ಕಾರಗಳ ಪ್ರಯತ್ನ : ಜೈರಾಮ್‌ ರಮೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ನ ಯಶಸ್ಸಿನಲ್ಲಿ ಎಲ್ಲಾ ಸರ್ಕಾರಗಳ ಪಾಲಿದೆ. ಇದನ್ನು ಮೋದಿ ಒಪ್ಪಿಕೊಳ್ಳುತ್ತಾರೆಯೇ ? ಎಂದು ಕಾಂಗ್ರೆಸ್‌ ನ ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ. ‌ಈ ಕುರಿತು ಟ್ವೀಟ್‌ ಮಾಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಐಎನ್‌ಎಸ್ ವಿಕ್ರಾಂತ್ 1999 ರಿಂದ ಎಲ್ಲಾ ಸರ್ಕಾರಗಳ ಸಾಮೂಹಿಕ ಪ್ರಯತ್ನವಾಗಿದೆ ಎಂದು ಪ್ರಧಾನಿ ಒಪ್ಪಿಕೊಳ್ಳುತ್ತಾರೆಯೇ? 1971 ರ ಯುದ್ಧದಲ್ಲಿ ನಮಗೆ ಉತ್ತಮ ಸೇವೆ ಸಲ್ಲಿಸಿದ ಭಾರತದ ಮೊದಲ INS ವಿಕ್ರಾಂತ್ ಅನ್ನು ಸಹ ನೆನಪಿಸಿಕೊಳ್ಳೋಣ. ಇದನ್ನು ಇಂಗ್ಲೆಂಡಿನಿಂದ ಪಡೆಯುವಲ್ಲಿ ಅತಿ ಹೆಚ್ಚು ನಿಂದಿಸಲ್ಪಟ್ಟಿರುವ ಕೃಷ್ಣಮೆನನ್‌ ಪ್ರಮುಖ ಪಾತ್ರ ವಹಿಸಿದ್ದರು.” ಎಂದು ಅವರು ತಮ್ಮ ಟ್ವೀಟರ್‌ ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!