‘ಶ್ರಮಜೀವಿ ಎಕ್ಸ್‌ಪ್ರೆಸ್’ ನಲ್ಲಿ ತಪಾಸಣೆ ರೈಡ್‌: ಟಾಯ್ಲೆಟ್ ಡೋರ್‌ ತೆಗೆದ ರೈಲ್ವೆ ಪೊಲೀಸರಿಗೆ ಕಾದಿತ್ತು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿಯಿಂದ ಬಿಹಾರದ ರಾಜ್‌ಗಿರ್‌ಗೆ ಬರುತ್ತಿದ್ದ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸಿದ ರೈಲ್ವೆ ಪೊಲೀಸರಿಗೆ ಶಾಕ್ ಕಾದಿತ್ತು. ಅದೇನೆಂದರೆ ರೈಲಿನ ಶೌಚಾಲಯದ ಬಾಗಿಲನ್ನು ತೆಗೆದ ಪೊಲೀಸರಿಗೆ ಅಲ್ಲಿ ಯುವಕನೋರ್ವನ ಮೃತದೇಹ ಸಿಕ್ಕಿದೆ .

ರೈಲಿನ ಶೌಚಾಲಯದಲ್ಲಿ ಮೃತಪಟ್ಟ ವ್ಯಕ್ತಿಯನ್ನು 36 ವರ್ಷದ ಸುನೀಲ್ ಚೌಹಾಣ್ ಎಂದು ಗುರುತಿಸಲಾಗಿದೆ. ಸುನೀಲ್ ಚೌಹಾಣ್ ಬಿಹಾರ ರಾಜ್ಯದ ನವಾಡ ಜಿಲ್ಲೆಯ ನಿವಾಸಿಯಾಗಿದ್ದು ಮುಸಾಫಿರ್ ಚೌಹಾಣ್ ಎಂಬುವವರ ಪುತ್ರನಾಗಿದ್ದ.

ಜಿಆರ್‌ಪಿ ಸ್ಟೇಷನ್ ಇನ್‌ಚಾರ್ಜ್‌ ಜಿತೇಂದ್ರ ಕುಮಾರ್ ಸಿಂಗ್ ಪ್ರಕಾರ, ಶ್ರಮಜೀವಿ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯ ಶೌಚಾಲಯದಲ್ಲಿ ಒಂದು ಮೃತದೇಹವೊಂದು ಪತ್ತೆಯಾಗಿತ್ತು. ದೆಹಲಿಯಿಂದ ರಾಜ್‌ಗಿರ್‌ಗೆ ಬಂದ ಈ ರೈಲನ್ನು ರಾಜ್‌ಗಿರ್ ಸ್ಟೇಷನ್‌ನಲ್ಲಿ ಎಂದಿನಂತೆ ತಪಾಸಣೆ ಮಾಡುತ್ತಿದ್ದ ವೇಳೆ ಶವ ಪತ್ತೆಯಾಗಿದೆ. ಇದೇ ವೇಳೆ ಮೃತ ಯುವಕ ಪಾಕೆಟ್‌ನಲ್ಲಿ ಆಧಾರ್‌ ಕಾರ್ಡ್‌ ಕೂಡ ಪತ್ತೆಯಾಗಿತ್ತು. ಹೀಗಾಗಿ ಮೃತ ಯುವಕನ ಗುರುತು ಪತ್ತೆ ಮಾಡುವುದಕ್ಕೆ ಪೊಲೀಸರಿಗೆ ಸುಲಭವಾಗಿದೆ.

ಬಳಿಕ ರೈಲ್ವೆ ಪೊಲೀಸರು ಮೃತ ಯುವಕ ಸುನೀಲ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಸುನೀಲ್ ಕುಟುಂಬದವರು ಆತನ ಬಗ್ಗೆ ಮಾಹಿತಿ ನೀಡಿದ್ದು, ಸುನೀಲ್‌ ಕೆಲಸದ ಕಾರಣಕ್ಕೆ ದೆಹಲಿಯಲ್ಲಿ ನೆಲೆಸಿದ್ದ. ಆರು ವರ್ಷಗಳ ಹಿಂದೆ ಆತನ ಪತ್ನಿ ತೀರಿಕೊಂಡಿದ್ದರು. ಇವರಿಬ್ಬರಿಗೂ ಆರು ವರ್ಷದ ಮಗಳು ಹಾಗೂ 8 ವರ್ಷದ ಮಗನಿದ್ದು, ಮಕ್ಕಳ ಖರ್ಚುವೆಚ್ಚದ ಜವಾಬ್ದಾರಿಯ ನಿಭಾಯಿಸುವ ಕಾರಣಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಈ ಹಠಾತ್ ನಿಧನ ಕುಟುಂಬಸ್ಥರನ್ನು ಆಘಾತಕ್ಕಿಡು ಮಾಡಿದೆ.

ಆತ ಹೇಗೆ ಹಾಗೂ ಯಾವಾಗ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲೇರಿದ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ, ಏಕೆಂದರೆ ಆತ ದೆಹಲಿಯಿಂದ ಬಿಹಾರದ ರಾಜ್‌ಗಿರ್‌ಗೆ ಪ್ರಯಾಣಿಸುತ್ತಿರುವ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ಆತನ ದೇಹ ಹೇಗೆ ರೈಲಿನ ಶೌಚಾಲಯವನ್ನು ಸೇರಿತ್ತು ಇದು ಏನಾದರು ಹತ್ಯೆ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!