ಟಿವಿ ಶೋ ನೋಡಿ ಬಾಲಕನ ಕಿಡ್ನ್ಯಾಪ್‌, ಕೊಲೆ: ಆರೋಪಿಗಳು ಅಂದರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಿವಿ ಕಾರ್ಯಕ್ರಮದಿಂದ ಪ್ರೇರಿತರಾದ ಐವರು ವಿದ್ಯಾರ್ಥಿಗಳು ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಇದೇ ತಿಂಗಳ 9 ರಂದು ನಡೆದಿದೆ.

ಏನಿದು ಘಟನೆ?

ಪೊಲೀಸರ ಪ್ರಕಾರ, 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಯಾವುದೋ ಲೇವಾದೇವಿ ನಡೆಸಿ 40 ಸಾವಿರ ರೂಪಾಯಿ ಕಳೆದುಕೊಂಡಿರುತ್ತಾನೆ. ಮತ್ತೆ ಹಣವನ್ನು ವಾಪಸ್‌ ಪಡೆಯುವ ಬಗ್ಗೆ ಯೀಚಿಸುತ್ತಾ ವಿಚಾರವನ್ನು ತನ್ನಯ ನಾಲ್ವರು ಸ್ನೇಹಿತರಿಗೆ ತಿಳಿಸುತ್ತಾನೆ. ಎಲ್ಲರೂ ಹೇಗಾದರೂ ಹಣ ಹೊಂದಿಸಬೇಕೆಂದು ತೀರ್ಮಾನ ಮಾಡಿ ಟಿವಿ ಶೋ ನೋಡುತ್ತಿದ್ದ ವೇಲೆ ಇವರ ತಲೆಗೆ ಭಯಾನಕ ಐಡಿಯಾ ಹೊಳೆಯುತ್ತದೆ. ಅದೇ ಯಾರನ್ನಾದರೂ ಅಪಹರಿಸಿ ಹಣಕ್ಕೆ ಬೇಡಿಕೆಯಿಡುವುದು. 15 ಮತ್ತು 16 ವರ್ಷ ವಯಸ್ಸಿನವರಾದ ಇವರು ಅಂದುಕೊಂಡಂತೆ ಶಾಲೆ ಬಳಿ ಒಂಟಿಯಾಗಿ ಆಟವಾಡುತ್ತಿದ್ದ ಬಾಲಕನನ್ನು ಅಪಹಿರಿಸಿದ್ದಾರೆ.

ಅಲ್ಲಿಂದ ಆರೋಪಿಗಳು ಬಾಲಕನನ್ನು ಬೈಕ್ ನಲ್ಲಿ ಕರೆದುಕೊಂಡು ಅಲಿಘಡ್ ಪ್ರದೇಶದಲ್ಲಿರುವ ಆರೋಪಿಯ ಮನೆಯಲ್ಲಿ ಕಟ್ಟಿಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟರೆ ಸಿಕ್ಕಿಬೀಳಬಹುದೆಂಬ ಅನುಮಾನದಿಂದ ಬಾಲಕನ ಬಾಯಿಗೆ ಕರ್ಚೀಫ್‌ ತುರುಕಿ ಕೊಲೆಗೈದು ನದಿಗೆ ಎಸೆದಿದ್ದಾರೆ. ಮತ್ತೊಂದೆಡೆ, ಬಾಲಕನ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮರುದಿನ ಬಾಲಕನ ಶವ ನದಿಯಲ್ಲಿ ಪತ್ತೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು 100 ಸಿಸಿ ಕ್ಯಾಮೆರಾಗಳ ದೃಶ್ಯಾವಳಿ 200 ಜನರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಐವರು ಆರೋಪಿಗಳ ತಗಲಾಕ್ಕೊಂಡಿದ್ದಾರೆ. ಮೊದಲಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಕೊನೆಗೂ ಸತ್ಯ ಒಪ್ಪಿಕೊಂಡ ಅವರನ್ನು ಶನಿವಾರ ಬಂಧನ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!