October 7, 2026
Wednesday, October 7, 2026
spot_img

Instant cake | ಓವನ್ ಬೇಡ, ಮೊಟ್ಟೆಯೂ ಬೇಡ: ಕುಕ್ಕರ್‌ನಲ್ಲೇ ಮಾಡಿ ಸೂಪರ್ ಚಾಕೊಲೇಟ್ ಕೇಕ್!

ಕೇಕ್ ಮಾಡಬೇಕೆಂದರೆ ಓವನ್ ಇರಲೇಬೇಕು, ಮೊಟ್ಟೆ ಬಳಸಲೇಬೇಕು ಎನ್ನುವಂತಿಲ್ಲ ಈಗ ನಿಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಕುಕ್ಕರ್ ಬಳಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಬೇಕರಿಗಿಂತಲೂ ರುಚಿಯಾದ ಎಗ್‌ಲೆಸ್ ಚಾಕೊಲೇಟ್ ಕೇಕ್ ತಯಾರಿಸಬಹುದು. ಹತ್ತಿಯಂತೆ ಮೃದುವಾಗಿರುವ ಈ ಸೂಪರ್ ಚಾಕೊಲೇಟ್ ಕೇಕ್ ಅನ್ನು ಕೇವಲ 30-40 ನಿಮಿಷಗಳಲ್ಲಿ ಯಾರು ಬೇಕಾದರೂ ಸುಲಭವಾಗಿ ಮಾಡಬಹುದು

ಬೇಕಾಗುವ ಸಾಮಾಗ್ರಿಗಳು

ಮೈದಾ ಹಿಟ್ಟು

ಸಕ್ಕರೆ ಪುಡಿ

ಕೋಕೋ ಪೌಡರ್

ಬೇಕಿಂಗ್ ಪೌಡರ್

ಬೇಕಿಂಗ್ ಸೋಡಾ

ಹಾಲು

ರಿಫೈನ್ಡ್ ಎಣ್ಣೆ

ವೆನಿಲ್ಲಾ ಎಸೆನ್ಸ್

ಮಾಡುವ ವಿಧಾನ

ಪ್ರೆಶರ್ ಕುಕ್ಕರ್‌ನ ತಳಕ್ಕೆ 1 ಕಪ್ ಉಪ್ಪು ಅಥವಾ ಮರಳು ಹಾಕಿ. ಅದರ ಮೇಲೆ ಒಂದು ಸಣ್ಣ ಸ್ಟ್ಯಾಂಡ್ ಇಟ್ಟು ಕುಕ್ಕರ್ ಮುಚ್ಚಳದ ಗ್ಯಾಸ್ಕೆಟ್ ಮತ್ತು ವಿಸ್ಲ್ ತೆಗೆದು, ಮುಚ್ಚಿ 10 ನಿಮಿಷ ಮಧ್ಯಮ ಉರಿಯಲ್ಲಿ ಕಾಯಲು ಬಿಡಬೇಕು. ನಂತರ ಒಂದು ಪಾತ್ರೆಗೆ ಜರಡಿ ಇಟ್ಟು ಮೈದಾ ಹಿಟ್ಟು, ಸಕ್ಕರೆ ಪುಡಿ, ಕೋಕೋ ಪೌಡರ್, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಜರಡಿ ಹಿಡಿದು ಮಿಕ್ಸ್ ಮಾಡಿ. ಈ ಒಣ ಹಿಟ್ಟಿಗೆ ಹಾಲು, ಎಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಗಂಟಿಲ್ಲದಂತೆ ಒಂದೇ ದಿಕ್ಕಿನಲ್ಲಿ ಚೆನ್ನಾಗಿ ಕೈಯಾಡಿಸಿ ಕೇಕ್ ಬ್ಯಾಟರ್ ಸಿದ್ಧಪಡಿಸಿಕೊಳ್ಳಬೇಕು.

ನಂತರ ಕೇಕ್ ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ, ಒಣ ಮೈದಾ ಹಿಟ್ಟನ್ನು ಉದುರಿಸಿ, ನಂತರ ಸಿದ್ಧಪಡಿಸಿದ ಕೇಕ್ ಹಿಟ್ಟನ್ನು ಅದಕ್ಕೆ ಸುರಿದು, ಪಾತ್ರೆಯನ್ನು 2 ಬಾರಿ ಟ್ಯಾಪ್ ಮಾಡಬೇಕು. ಈಗ ಈ ಕೇಕ್ ಪಾತ್ರೆಯನ್ನು ಕುಕ್ಕರ್ ಒಳಗಿರುವ ಸ್ಟ್ಯಾಂಡ್ ಮೇಲೆ ಇಟ್ಟು ಮುಚ್ಚಳ ಮುಚ್ಚಿ. ಕಡಿಮೆ ಉರಿಯಲ್ಲಿ 30 ರಿಂದ 35 ನಿಮಿಷ ಬೇಯಿಸಿ. ಒಂದು ಕಡ್ಡಿ ಅಥವಾ ಚಾಕುವನ್ನು ಕೇಕ್ ಮಧ್ಯಕ್ಕೆ ಚುಚ್ಚಿ ನೋಡಿ, ಅದು ಕ್ಲೀನ್ ಆಗಿ ಬಂದರೆ ಕೇಕ್ ಬೆಂದಿದೆ ಎಂದರ್ಥ. ಕೇಕ್ ಪೂರ್ತಿ ತಣ್ಣಗಾದ ಮೇಲೆ ಪಾತ್ರೆಯಿಂದ ಹೊರಗೆ ತೆಗೆದು ಕತ್ತರಿಸಿ ಸವಿಯಬಹುದು.

Must Read