Sunday, November 27, 2022

Latest Posts

ಕುತೂಹಲ ಮೂಡಿಸಿದ ಯತ್ನಾಳ್- ಅರುಣ್ ಸಿಂಗ್ ಪರಸ್ಪರ ಮಾತುಕತೆ

ಹೊಸದಿಗಂತ ವರದಿ,ವಿಜಯಪುರ

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಪ್ರತ್ಯೇಕವಾಗಿ ಕುಳಿತು ಪರಸ್ಪರ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುವಂತಾಗಿದೆ.

ಇಲ್ಲಿನ ಹೊರ ಭಾಗದಲ್ಲಿರುವ ಹೈಪರ್ ಮಾರ್ಟ್‌‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅರುಣ್ ಸಿಂಗ್ ಪರಸ್ಪರ ಎದುರಾಬದುರಾ ಕುಳಿತು ಮಹತ್ವದ ರೀತಿಯಲ್ಲಿ ಮಾಡಿದ್ದಾರೆ. ಅಲ್ಲದೇ, ಯತ್ನಾಳ, ಸಿಂಗ್ ಅರ್ಧ ಗಂಟೆಗೂ ಹೆಚ್ಚು ಇಬ್ಬರು ಮಾತು ಕತೆ ನಡೆಸಿದ್ದಾರೆ.

ಇನ್ನು ಅರುಣ್ ಸಿಂಗ್ ಅವರಿಂದ ಯತ್ನಾಳ ಅಂತರ ಕಾಯ್ದುಕೊಂಡಿದ್ದರು.
ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಯತ್ನಾಳ ಕೇವಲ ಒಬ್ಬ ಶಾಸಕ ಎಂದು ಅರುಣ್ ಸಿಂಗ್ ಹೇಳಿಕೆ ನೀಡಿದ್ದರು. ಸದ್ಯ
ಯತ್ನಾಳ ಜೊತೆ ಸಭೆ ಮಾಡಿದ್ದು, ಅದೆನನ್ನು ಚರ್ಚಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!