Thursday, December 1, 2022

Latest Posts

ಕಲಬುರಗಿಯಲ್ಲಿ ಚಂದ್ರ ಗ್ರಹಣವನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳು, ಸಾರ್ವಜನಿಕರು!

ಹೊಸದಿಗಂತ ವರದಿ, ಕಲಬುರಗಿ


ಹದಿನೈದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಖಗೋಳ ವಿಜ್ಞಾನದ ವಿಸ್ಮಯ ಗ್ರಹಣವನ್ನು ನಗರದ ಜನತೆ ಮಂಗಳವಾರ ಕಣ್ತುಂಬಿಕೊಂಡರು.

ನಗರದ ಅಪ್ಪಾ ಕೆರೆಯ ದಂಡೆಯ ಮೇಲಿರುವ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಖಗೋಳ ವಿಸ್ಮಯವಾದ ಚಂದ್ರ ಗ್ರಹಣ ನೋಡಲು ಎರಡು ದೂರದರ್ಶಕ ಅಳವಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು, ನಗರದ ಸಾರ್ವಜನಿಕರು, ಮಕ್ಕಳು ನೋಡಿ ಸಂಭ್ರಮಿಸಿದರು.

ಚಂದ್ರ ಮತ್ತು ಸೂರ್ಯನ ಮಧ್ಯೆ ಭೂಮಿ ಬಂದಾಗ, ಭೂಮಿ ನೆರಳು ಚಂದ್ರನ ಮೇಲೆ ಬೀಳುವ ಮೂಲಕ ಪಾರ್ಶ್ವ ಚಂದ್ರಗ್ರಹಣ ಜಿಲ್ಲೆಯಲ್ಲಿ ಗೋಚರವಾಯಿತು. ಇದರ ಬಗ್ಗೆ ನೆರೆದ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಹೇಳಿತ್ತಿರುವುದು ಕಂಡು ಬಂತು.

ಪಾರ್ಶ್ವ ಚಂದ್ರ ಗ್ರಹಣ ಜಿಲ್ಲೆಯಲ್ಲಿ ಸಂಜೆ 5.46ಕ್ಕೆ ಆರಂಭವಾರೂ, ಕಣ್ಣಿಗೆ 6.15ಕ್ಕೆ ಕಂಡು ಬಂತು. ಸಂಜೆ 7.26ರವರೆಗೆ ಕೊನೆಯಾಯಿತು. ಶೇ.23ರಷ್ಟು ಚಂದ್ರ ಮರೆಯಾಗಿದ್ದ ಎಂದು ಅಧಕಾರಿಗಳು ತಿಳಿಸಿದ್ದು ಕಂಡು ಬಂತು.

ನೂತನ ವಿದ್ಯಾಲಯದ ಬೌದ್ಧಶಾಸ ವಿಭಾಗದ ಶ್ರೀಕಾಂತ ಎಕ್ಕೇಳಿಕರ್, ರಾಧಾ ಖಜೂರಿ, ಶ್ರೀಪಾದ ಜೋಶಿ ವಿದ್ಯಾರ್ಥಿನಿಯರನ್ನು ಕರೆತಂದಿದ್ದರು. ಕೇಂದ್ರದ ಲಕ್ಷ್ಮಿ ನಾರಾಯಣ, ರಮೇಶ, ಮಲ್ಲಿಕಾರ್ಜುನ, ರಾಘವೇಂದ್ರಘಿ, ವೈಷ್ಣವಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!