ಹೊಸದಿಗಂತ ವರದಿ ಕಲಬುರಗಿ:
ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಮುಖ ಆರೋಪಿ ಕಿಂಗ್ ಪಿನ್ ಆರ್.ಡಿ.ಪಾಟೀಲ್ ನನ್ನು ಒಂಬತ್ತು ದಿನಗಳ ಕಾಲ ವಿಚಾರಣೆಗಾಗಿ ಸಿಐಡಿ ತನ್ನ ವಶಕ್ಕೆ ಪಡೆದುಕೊಂಡಿದೆ.
ಕಿಂಗ್ ಪಿನ್ ಆರ್.ಡಿ.ಪಾಟೀಲ್ ನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು,ಇದೀಗ ಮನವಿಯನ್ನು ಸ್ವೀಕರಿಸಿದ ಕಲಬುರಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಂಬತ್ತು ದಿನಗಳ ಕಾಲ ಆರ್.ಡಿ.ಪಾಟೀಲ್ ನ್ನು ಸಿಐಡಿ ವಶಕ್ಕೆ ನೀಡಿದೆ.
ಇನ್ನೂ ಹೆಚ್ಚಿನ ವಿವರಣೆಗಾಗಿ ಆರ್.ಡಿ.ಪಾಟೀಲ್ ನನ್ನು ವಶಕ್ಕೆ ನೀಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಸಿಐಡಿ, ಅರ್ಜಿ ಪುರಸ್ಕರಿಸಿ ಒಂಬತ್ತು ದಿನಗಳ ಕಾಲ ಕಸ್ಟಡಿಗೆ ನೀಡಿ ಕಲಬುರಗಿ ಎರಡನೇ ಜೆಎಂಎಫಸಿ ನ್ಯಾಯಾಲಯದ ನ್ಯಾಯಮೂರ್ತಿ ಸ್ಮೀತಾ ಆದೇಶ ಹೊರಡಿಸಿದ್ದಾರೆ.