Tuesday, August 16, 2022

Latest Posts

ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ್‌ ಕಂದಕೂರ ಸೆರೆಹಿಡಿದ ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜ್ಯದ ಕೊಪ್ಪಳ ಜಿಲ್ಲೆಯ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರು ಸೆರೆಹಿಡಿದ ಛಾಯಾಚಿತ್ರವೊಂದಕ್ಕೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಎಕ್ಸಲೆನ್ಸ್(ಐಸಿಪಿಇ) ಪ್ರಶಸ್ತಿ ಲಭಿಸಿದೆ.

ಅವರು ಈ ಛಾಯಾಚಿತ್ರವನ್ನು ಕೇರೂರಿನ ಅರಣ್ಯ ಸಿದ್ಧೇಶ್ವರ ಜಾತ್ರೆಯಲ್ಲಿ ಸೆರೆಹಿಡಿದಿದ್ದರು. ಹಳದಿ ಭಂಡಾರದಲ್ಲಿ ಮಿಂದೆದ್ದ ಭಕ್ತರು ಕಾರಣಿಕ ಕೇಳಲು ಕೌತುಕರಾಗಿ ಒಂದೆಡೆ ಕುಳಿತಿರುವ ಫೋಟೋವನ್ನು ಅಚ್ಚುಕಟ್ಟಾಗಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಅದಕ್ಕೆ ʼಯೆಲ್ಲೋ ಬಿಲೀವರ್ಸ್ʼ ಎಂಬ ಶೀರ್ಷಿಕೆ ನೀಡಲಾಗಿತ್ತು. ಅದು ಸಿಂಗಪೂರದಲ್ಲಿ ನಡೆದ ಸಿಂಗಪೂರ ಫೊಟೋ ಸಕ್ರ್ಯೂಟ್-2022 ಸ್ಪರ್ಧೆಯ ಕಲರ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಆ.20 ರಂದು ಸಿಂಗಪೂರದ ಫಾಚ್ರ್ಯೂನ್ ಸೆಂಟರ್ ನಲ್ಲಿ ಪ್ರಶಸ್ತಿ ವಿಜೇತ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss