ನ್ಯಾನ್ಸಿ ಪೆಲೋಸಿ ಎಲ್ಲಿ? ಅಪರಿಚಿತ ದುಷ್ಕರ್ಮಿಯಿಂದ ಪಾಲ್‌ ಪೆಲೋಸಿ ಮೇಲೆ ಸುತ್ತಿಗೆಯಿಂದ ಹಲ್ಲೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಪತಿ ಪೌಲ್ ಪೆಲೋಸಿ (82) ಮೇಲೆ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ದಾಳಿಕೋರ ನ್ಯಾನ್ಸಿ ಪೆಲೋಸಿಯ ಮನೆಗೆ ನುಗ್ಗಿ ‘ನ್ಯಾನ್ಸಿ ಎಲ್ಲಿ?’ ಎಂದು ಕೂಗಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ನ್ಯಾನ್ಸಿ ಪೆಲೋಸಿ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಪುಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸದ್ಯ ಪಾಲ್ ಪೆಲೋಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಾಲ್ ಪೆಲೋಸಿ ದಾಳಿಗೊಳಗಾದಾಗ ನ್ಯಾನ್ಸಿ ಪೆಲೋಸಿ ವಾಷಿಂಗ್ಟನ್‌ನಲ್ಲಿದ್ದರು. ದಾಳಿಕೋರ ಅವರ ಮನೆಗೆ ಹೇಗೆ ಪ್ರವೇಶಿಸಿದ್ದಾರೆ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ತಿಂಗಳು 8ರಂದು ಉಪಚುನಾವಣೆ ನಡೆಯಲಿದೆ. ಈ ವೇಳೆ ಇಂತಹ ಘಟನೆ ನಡೆದಿರುವುದು ಗಮನಾರ್ಹ. ದಾಳಿಕೋರನ ಹೆಸರು ಡೇವಿ ಡಿಪಾಪ್ (42) ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಪಾಲ್ ಪೆಲೋಸಿ ಅವರ ತಲೆ ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!