Saturday, February 4, 2023

Latest Posts

ಸಿದ್ದರಾಮಯ್ಯ ಅವಧಿಯ 59 ಪ್ರಕರಣಗಳ ಕುರಿತು ತನಿಖೆ: ಮುಖ್ಯಮಂತ್ರಿ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ೫೯ ಪ್ರಕರಣಗಳ ಕುರಿತು ತನಿಖೆ ಮಾಡಿಸಲಾಗುತ್ತಿದೆ. ತನಿಖಾ ವರದಿ ಕಾಂಗ್ರೆಸ್ ನವರ ಬಂಡವಾಳ ಬಯಲು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹಿರೇಕೇರೂರ ಪಟ್ಟಣದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿನ ೫೯ ಪ್ರಕರಣಗಳ ಕುರಿತು ತನಿಖೆ ಮಾಡಿಸದೇ ಆ ಪ್ರಕರಣಗಳನ್ನು ಮುಚ್ಚಿಹಾಕಿದರು. ಆ ಪ್ರಕರಣಗಳನ್ನು ಮುಚ್ಚಿ ಹಾಕುವುದಕ್ಕಾಗಿ ಸ್ವಾಯತ್ತ ಸ್ಥೆಯಾದ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದರು ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಹರಿಹಾಯ್ದರು.

ಆ ೫೯ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದ ಸಿಬಿಐ ಅಧಿಕಾರಿ ನಿಗೋಢವಾಗಿ ಸಾವನ್ನಪ್ಪಿದರು. ಒಂದುವೇಳೆ ಆ ಸಮಯದಲ್ಲಿ ತನಿಖೆಯಾಗಿದ್ದರೆ ಇವರ ಸರ್ಕಾರದ ಭ್ರಷ್ಟಾಚಾರದ ಬಂಡವಾಳ ಬಯಲಾಗುತ್ತಿತ್ತು ಎಂದು ಹೇಳಿದರು.

ತಮ್ಮ ಭಷ್ಟಾಚಾರಗಳನ್ನು ಮುಚ್ಚಿಹಾಕುವದಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿ ತಮ್ಮ ಕೈಗೊಂಬೆಯಾದ ಎಸಿಬಿಯನ್ನು ಪ್ರಾಭಿಸಿದರು. ನ್ಯಾಯಾಲಯದ ಆದೇಶದ ಮೇರೆಗೆ ನಮ್ಮ ಸರ್ಕಾರ ಮತ್ತೆ ಲೋಕಾಯುಕ್ತ ಸಂಸ್ಥೆಯನ್ನು ಪ್ರಾರಂಭಿಸಿ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದ ೫೯ ಪ್ರಕರಣಗಳನ್ನು ತನಿಖೆ ಮಾಡುವುದಕ್ಕೆ ನೀಡಲಾಗುವುದು ಆಗ ನಿಮ್ಮ ಭ್ರಷ್ಟಾಚಾರದ ಬಣ್ಣ ಬಯಲಾಗುವುದು ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರವಾಗಿ ಟಾಂಗ್ ನೀಡಿದರು.

ನಾವು ತನಿಖೆ ಮಾಡಿಸಿದ ಮೇಲೆ ನಿಮ್ಮ ಮುಖವಾಡ ಕಳಚಲಿದೆ. ನಿಮ್ಮ ಬ್ರಷ್ಟಾಚಾರದ ಮುಖವಾಡ ಹೊರ ಬರಲಿದೆ. ಜನರಿಗೂ ನಿಮ್ಮ ಮುಖವಾಡ ಅರ್ಥವಾಗಲಿ ಎಂದ ಸಿಎಮ್.

ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಮೂರು ರೂಪಾಯಿ ಚೀಲಕ್ಕೆ ತಮ್ಮ ಫೋಟೋ ಹೆಸರನ್ನು ಹಾಕಿಕೊಂಡು ಅನ್ನ ಭಾಗ್ಯ ಯೋಜನೆ ಎಂದು ಜಂಬ ಕೊಚ್ಚಿಕೊಂಡರು. ಇಂತಹ ಅನ್ಯಭಾಗ್ಯ ಯೋಜನೆಗೂ ಕನ್ನ ಹಾಕಿದವರು ಕಾಂಗ್ರೆಸ್ಸಿಗರು. ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದವರು ಅವರು ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನೇ ಪಡಿತರ ಅಕ್ಕಿ ವಿತರಣೆಯಲ್ಲಿ ಕಡಿತ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಮತ್ತೆ ಹೆಚ್ಚಳಮಾಡಿದರು. ಈಗ ಚುನಾವಣಾ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ದರೆ ಅಷ್ಟು ಕೆಜಿ, ಇಷ್ಟು ಕೇಕಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಹೇಳುವುದಕ್ಕೆ ನಾಚಿಕೆ ಬರಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡಾಮಂಡಲವಾದರು ಮುಖ್ಯಮಂತ್ರಿಗಳು.

‌ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!