iPL 2022 | ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ- ಪಂಜಾಬ್‌ ಕಿಂಗ್ಸ್‌ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸಂಜೆ 7:30 ಕ್ಕೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ ಸೆಣಸಾಡಲಿದೆ. ಎರಡೂ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿರಲಿದೆ. 12 ಪಂದ್ಯಗಳನ್ಗನಾಡಿ 7 ಪಂದ್ಯ ಗೆದ್ದು ಐದರಲ್ಲಿ ಸೋತು ನಾಲಕ್ನೇ ಸ್ಥಾನದಲ್ಲಿರುವ ಆರ್ಸಿಬಿ ಉಳಿದ ಎರಡೂ ಪಂದ್ಯಗಳನ್ನು ಗೆದ್ದು ಸುಲಭವಾಗಿ ಪ್ಲೇ ಆಫ್‌ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ತಂಡದ ಅಂಕಗಳಿಗೆ 16ಕ್ಕೆ ಏರಲಿದ್ದು ಪ್ಲೇ ಆಫ್‌ ಪ್ರವೇಶ ಸುಲಭವಾಗಲಿದೆ. ಅದೇರೀತಿ ಪಂಜಾಬ್‌ ಕಿಂಗ್ಸ್‌ ಈ ಪಂದ್ಯದಲ್ಲಿ ಗೆದ್ದರೆ ಮಾತ್ರವೇ ಪ್ಲೇ ಆಫ್‌ ರೇಸ್‌ ನಲ್ಲಿ ಉಳಿದುಕೊಳ್ಳಲಿದೆ. ಈ ವರೆಗೆ 11 ಪಂದ್ಯಗಳನ್ನಾಡಿ 5 ರಲ್ಲಿ ಗೆದ್ದು 6ರಲ್ಲಿ ಸೋತಿರುವ ಪಂಜಾಬ್‌ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ, ಇನ್ನೂಳಿದ ಮೂರು ಪಂದ್ಯಗಳನ್ನು ಗೆದ್ದರೂ ತಂಡದ ಅಂಕಗಳಿಕೆ 16ಕ್ಕೆ ಏರಿಕೆಯಾಗಲಿದೆ. ಆಗ ಉಳಿದ ತಂಡಗಳ ಪಲಿತಾಂಶದ ಆಧಾರದ ಮೇಲೆ ತಂಡದ ಪ್ಲೇ ಆಫ್‌ ಪ್ರವೇಶ ನಿರ್ಧಾರವಾಗಲಿದೆ.
ಫಾಫ್ ಡು ಪ್ಲೆಸಿಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ 67 ರನ್‌ಗಳಿಂದ ಗೆದ್ದುಕೊಂಡಿತು. ತಂಡದ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ. ಟೂರ್ನಿಯ ಆರಂಭದಲ್ಲೇ ಸೋಲುಣಿಸಿದ್ದ ಪಂಜಾಬ್ ಕಿಂಗ್ಸ್ ವಿರುದ್ಧ ಉತ್ತಮ ರನ್‌ ರೇಟ್‌ ನೊಂದಿಗೆ ಪ್ಲೇ ಆಪ್‌ ಪ್ರವೇಶಿಸುವ ಗುರಿಯೊಂದಿಗೆ ಫಾಫ್ ಡು ಪ್ಲೆಸಿಸ್ ಬಳಗ ಕನಕ್ಕಿಳಿಯಲಿದೆ.
ಆಸಿಬಿ ಪರ ಫಾಫ್ ಡು ಪ್ಲೆಸಿಸ್, ಯುವ ಆಟಗಾರ ರಜತ್ ಪಾಟಿದಾರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅಬ್ಬರಿಸುತ್ತಿದ್ದಾರೆ. ಶಹಬಾಜ್ ಅಹ್ಮದ್, ವನಿಂದು ಹಸರಂಗ, ಮತ್ತು ಮಹಿಪಾಲ್ ಲೊಮ್ರೋರ್ ತಂಡದ ಆರ್ಡರ್‌ ಗೆ ಬಲ ತಂದಿದ್ದಾರೆ.
ವೇಗಿ ಜೋಶ್ ಹ್ಯಾಜಲ್‌ವುಡ್ ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ಹಿಸುತ್ತಿದ್ದಾರೆ. ಆದರೆ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅಸ್ಥಿರ ಪ್ರದರ್ಶನ ತಂಡಕ್ಕೆ ಕೊಂಚ ಕಳವಳ ತಂದಿದೆ.
ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 189 ರನ್‌ ಕಲೆಹಾಕಿಯೂ 6 ವಿಕೆಟ್‌ಗಳಿಂದ ಸೋಲು ಕಂಡಿತ್ತು. ಶಿಖರ್ ಧವನ್ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಜಾನಿ ಬೈರ್‌ಸ್ಟೋವ್ ಉತ್ತಮ ಆರಂಬ ಒದಗಿಸಬೇಕಿದೆ. ಮಯಾಂಕ್ ಅಗರ್ವಾಲ್ ಅವರು ಜಿತೇಶ್ ಶರ್ಮಾ ಮತ್ತು ಭಾನುಕಾ ರಾಜಪಕ್ಸೆಯೊಂದಿಗೆ ಮಧ್ಯಮ ಕ್ರಮಾಂಕವನ್ನು ಮುನ್ನಡೆಸುವ ಮತ್ತು ಮಧ್ಯಮ ಓವರ್‌ಗಳಲ್ಲಿ ಸ್ಕೋರ್ ಅನ್ನು ಹೆಚ್ಚಿಸುವ ಜವಾಬ್ದಾರಿ ಹೊರಬೇಕಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಬಿಗ್ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದು ತಂಡವು ಅವರಿಂದ ಹೆಚ್ಚಿನ ರನ್‌ ಕೊಡುಗೆ ನಿರೀಕ್ಷಿಸುತ್ತದೆ.
ಪಂಜಾಬ್ ಕಿಂಗ್ಸ್ ಐಪಿಎಲ್‌ ನಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದರೂ ಆರ್ಸಿಬಿ ವಿರುದ್ಧ ಉತ್ತಮ ಪ್ರದರ್ಶನ ತೋರಿದೆ. ಇದುವರೆಗೆ ಎರಡೂ ತಂಡಗಳು 28 ​​ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ತಂಡ 16 ಗೆದ್ದಿದೆ. ಎರಡೂ ಕಡೆ ಆಡಿದ ಕ್ರಿಸ್ ಗೇಲ್ ಅತಿ ಹೆಚ್ಚು ರನ್ ಗಳಿಸಿದ್ದಾರೆ (873).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!