ಬೆಂಗಳೂರು ಅಥವಾ ಇಸ್ತಾಂಬುಲ್ ಅಲ್ಲ! IPL 2023 ರ ಮಿನಿ ಹರಾಜಿಗೆ ಆತಿಥ್ಯ ವಹಿಸಲಿದೆ ಭಾರತದ ಈ ನಗರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2023ರ ಐಪಿಎಲ್‌ ಗೆ ಭರದ ಸಿದ್ಧತೆಗಳು ಆರಂಭವಾಗಿವೆ. ನವೆಂಬರ್ 15 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದೆ. ಈ ನಡುವೆ ಐಪಿಎಲ್ 2023 ರ ಮಿನಿ ಹರಾಜಿನ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು ಬಿಸಿಸಿಐ ಪಟ್ಟಿಯಲ್ಲೇ ಇರದಿದ್ದ ಅಚ್ಚರಿಯ ತಾಣವೊಂದರಲ್ಲಿ ಹರಾಜು ಪ್ರಕ್ರಿಯೆ ನಡೆಸಲಿದೆ. ಹಿಂದಿನ ವರದಿಗಳ ಪ್ರಕಾರ ಟರ್ಕಿ ರಾಜಧಾನಿ ಇಸ್ತಾನ್‌ಬುಲ್ ಅಥವಾ ಬೆಂಗಳೂರಿ ನಲ್ಲಿ ನಡೆಯಲಿದೆ ಎನ್ನಲಾಗಿತ್ತು.
ಈ ಬಾರಿಯ ಮಿನಿ ಹರಾಜು ಭಾರತದಲ್ಲಿಯೇ ನಡೆಯಲಿದೆ ಎಂಬ ವಿಚಾರ ಇದೀಗ ದೃಢವಾಗಿದೆ. ಡಿಸೆಂಬರ್ 23 ರಂದು ಹರಾಜು ಪ್ರಕ್ರಿಯೆಗೆ ಕೇರಳದ ಕೊಚ್ಚಿ ನಗರ ಆತಿಥ್ಯ ವಹಿಸಲಿದೆ. 2022 ರ ಐಪಿಎಲ್ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆದಿತ್ತು. ಈ ಬಾರಿ ಸ್ಥಳ ಬದಲಾವನೆ ಮಾಡಲಾಗಿದೆ. ಈ ನಡುವೆ ಫ್ರಾಂಚೈಸಿಗಳ ಪೆರ್ಸ್‌ ಕೂಡ ಹೆಚ್ಚಿಸಲಾಗಿದ್ದು, ಪ್ರತಿ ತಂಡಕ್ಕೆ ಒಟ್ಟರೆ 95 ಕೋಟಿ ರೂ. ಖರ್ಚುಮಾಡಲು ಅವಕಾಶ ನೀಡಲಾಗಿದೆ.
ನವೆಂಬರ್‌ 15 ರ ಗಡುವು:
ಗಮನಿಸಬೇಕಾದ ಅಂಶವೆಂದರೆ ಎಲ್ಲಾ ಹತ್ತು ಐಪಿಎಲ್ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಲು ಗಡುವು ನೀಡಲಾಗಿದೆ. ಎಲ್ಲಾ ಹತ್ತು ತಂಡಗಳು ಬಿಡುಗಡೆ ಮಾಡಲಿರುವ ಆಟಗಾರರು ಯಾರೆಂಬುದನ್ನು ಈ ವೆರೆಗೆ ದೃಢೀಕರಣಗೊಂಡಿಲ್ಲ. ಡೆಲ್ಲಿ ಪ್ರಾಂಚೈಸಿ ಶಾರ್ದೂಲ್ ಠಾಕೂರ್, ಕೆಎಸ್ ಭರತ್, ನ್ಯೂಜಿಲೆಂಡ್‌ನ ಸ್ಫೋಟಕ ಹಿಟ್ಟರ್ ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್ ಮತ್ತು ಅಶ್ವಿನ್ ಹಬ್ಬರ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿವಾಗಿದೆ.
ಇತರ ಫ್ರಾಂಚೈಸಿಗಳಲ್ಲಿ, ಮಯಾಂಕ್ ಅಗರ್ವಾಲ್, ನವದೀಪ್ ಸೈನಿ, ಶಿವಂ ಮಾವಿ, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ರೊಮಾರಿಯೋ ಶೆಫರ್ಡ್, ಡೇವಿಡ್‌ ವಿಲ್ಲಿ, ಅಜಿಂಕ್ಯಾ ರಹಾನೆ, ಆರೋನ್ ಫಿಂಚ್ ಮುಂತಾದವರು ಬಿಡುಗಡೆಯಾಗುವ ನಿರೀಕ್ಷೆಯಿರುವ ದೊಡ್ಡ ಹೆಸರುಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!