ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಶಂಕಿತ ಉಗ್ರನ ಇಮ್ಯಾಜಿನರಿ ಸ್ಕೆಚ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನ ಹುಡುಕಾಟ ಕಬ್ಬಿಣದ ಕಡಲೆಯಂತಾಗಿದೆ.

ಶಂಕಿತ ಉಗ್ರ ಎಲ್ಲಿಯೂ ತನ್ನ ಮುಖ ಕಾಣದಂತೆ ಟೋಪಿ ಹಾಗೂ ಮಾಸ್ಕ್ ಬಳಸಿದ್ದಾನೆ. ಬ್ಲಾಸ್ಟ್ ಮುಂಚೆ ಹಾಗೂ ಬ್ಲಾಸ್ಟ್ ನಂತರ ಎಲ್ಲೆಲ್ಲಿ ಓಡಾಡಿದ್ದರೂ ಯಾವ ಸಿಸಿಟಿವಿಯಲ್ಲಿಯೂ ಆತನ ಮುಖ ಸ್ಪಷ್ಟವಾಗಿ ಕಂಡಿಲ್ಲ.

ಶಂಕಿತನ ಅರ್ಧ ಮುಖ ಕಾಣುವ ಸಿಸಿಟಿವಿಯ ಫೋಟೊವನ್ನು ಎನ್‌ಐಎಇ ಬಿಡುಗಡೆ ಮಾಡಿ ಹುಡುಕಿಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳ ತನಿಖೆಗೆ ಸಹಾಯವಾಗಲಿ ಎಂದು ಚಿತ್ರಕಾರರೊಬ್ಬರು ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡಿಸಿದ್ದಾರೆ.

ಕಲಾವಿದ ಹರ್ಷ ಎನ್ನುವವರು ಬಾಂಬರ್ ಈ ರೀತಿ ಇರಬಹುದು ಎಂದು ಊಹೆ ಮಾಡಿ ಬರೆದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ವೈರಲ್ ಆಗಿದೆ. ಇದನ್ನು ಬೆಂಗಳೂರು ಪೊಲೀಸ್ ಹಾಗೂ ಎನ್‌ಐಎಗೆ ಟ್ಯಾಗ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!