October 13, 2026
Tuesday, October 13, 2026
spot_img

ಐಪಿಎಸ್‌ ಅಧಿಕಾರಿ ಎಸ್‌.ರವಿ ದಿಢೀರ್‌ ರಾಜೀನಾಮೆ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಸ್‌ ಅಧಿಕಾರಿ ಎಸ್‌. ರವಿ ದಿಢೀರ್‌ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕೆಎಸ್‌ಆರ್‌ಪಿಯಲ್ಲಿ ಎಡಿಜಿಪಿಯಾಗಿ ಕಾರ್ಯನಿರ್ವಿಸುತ್ತಿರುವ ರವಿ ಅವರು ದಿಢೀರ್‌ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗಿದೆ.

ಐಪಿಎಸ್‌ ಅಧಿಕಾರಿ ಎಸ್‌. ರವಿ ಅವರು ರಾಜೀನಾಮೆ ಸಲ್ಲಿಕೆ ವೇಳೆ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 1998ರ ಬ್ಯಾಚ್​​ನ ಐಪಿಎಸ್ ಅಧಿಕಾರಿ ರವಿ ಅವರು, ಈ ಹಿಂದೆ ಗುಪ್ತಚರ ಇಲಾಖೆಯ ಎಡಿಜಿಪಿ ಆಗಿದ್ದರು. ಡಿಕೆ ಶಿವಕುಮಾರ್ ಅವರು ಸಿಎಂ ಆದ ಬಳಿಕ ಇವರನ್ನ ಕೆಎಸ್‌ಆರ್‌ಪಿ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿತ್ತು.

ರವಿ ಅವರಿಗೆ ನಿವೃತ್ತಿಗೆ ಆರು ತಿಂಗಳು ಬಾಕಿ ಇತ್ತು. ಇದೀಗ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಡಿಜಿ ಐಜಿಪಿ ಸಲೀಂ ಅವರು ಮಾಹಿತಿಯನ್ನು ದೃಢೀಕರಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಹಿರಿಯ ಅಧಿಕಾರ ಜೊತೆ ಮನಸ್ತಾಪ ಆದ ಕಾರಣ ರಾಜೀನಾಮೆ ನೀಡುತ್ತಿದ್ದಾರೆ ಎಂದೂ ಹೇಳಲಾಗಿದೆ.

Must Read