November 9, 2026
Monday, November 9, 2026
spot_img

ಮದುವೆಯಾದ ಒಂಬತ್ತೇ ತಿಂಗಳಿಗೆ ಹೆಣವಾದ ಗೃಹಿಣಿ: ಗಂಡನ ಮನೆಯಲ್ಲಿ ಆಗಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಯಾದ ಒಂಬತ್ತೇ ತಿಂಗಳಿವಗೆ ಗೃಹಿಣಿಯೊಬ್ಬಳು ಮೃತಪಟ್ಟಿರುವ ಘಟನೆ ಕೋಣನಕುಂಟೆ ಬಳಿ ನಡೆದಿದೆ.

23 ವರ್ಷದ ಸಿರಿಶಾ ಮೃತ ಗೃಹಿಣಿ. ಜಂಬೂಸವಾರಿ ದಿಣ್ಣೆ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸಿರಿಶಾ ಇಂದು ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ ಕೆಲವೇ ತಿಂಗಳಿಗೆ ಮಗಳು ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ.

ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕವಾಗಿ ಕುಗ್ಗಿದವಳಲ್ಲ. ಗಂಡ ಪ್ರಶಾಂತ್‌ ಹಾಗೂ ಅತ್ತೆ ರುಕ್ಮಿಣಿ ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ನಮಗೆ ತಿಳಿದಿತ್ತು. ಮಗಳು ಮಾನಸಿಕವಾಗಿ ನೊಂದಿರುವ ಕಾರಣ ಆತ್ಮಹತ್ಯೆಯ ಚಿಂತೆ ಮಾಡಿದ್ದಾಳೆ. ನಮಗೆ ನ್ಯಾಯ ಕೊಡಿಸಿ. ನಮ್ಮಂತೆ ಹೆಣ್ಣುಮಕ್ಕಳನ್ನು ಕೊಟ್ಟು ಪೋಷಕರು ಕಣ್ಣೀರು ಸುರಿಸದಂತೆ ಆಗಲಿ ಎಂದು ಸಿರಿಶಾ ಪೋಷಕರು ದೂರಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read