April 13, 2026
Monday, April 13, 2026
spot_img

ಅಮೆರಿಕದ ಫಿಫ್ತ್ ಫ್ಲೀಟ್ ಮೇಲೆ ಇರಾನ್ ದಾಳಿ: 21 ಸೈನಿಕರು ಬ*ಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮುಂದುವರಿದಿದ್ದು, ಬಹರೇನ್ ದೇಶದ ಮನಾಮದಲ್ಲಿರುವ ಅಮೆರಿಕದ ಐದನೇ ಫಿಫ್ಟ್ ಫ್ಲೀಟ್ ಮೇಲೆ ಇರಾನ್ ಮತ್ತೆ ದಾಳಿ ನಡೆಸಿದೆ.

ಅಮೆರಿಕದ ನೌಕೆಗಳ ಮೇಲೆ ಇರಾನ್​ನ ಹಲವಾರು ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ಹಾರಿಸಿದ್ದು, 21 ಸೈನಿಕರು ಬಲಿಯಾಗಿದ್ದಾರೆ.

ಇತ್ತೀಚೆಗೆ ಭಾರತಕ್ಕೆ ಬಂದು ವಾಪಸ್ ಹೋಗುತ್ತಿದ್ದ ಇರಾನೀ ಯುದ್ಧನೌಕೆಯೊಂದನ್ನು ಅಮೆರಿಕದ ಟಾರ್ಪಿಡೋ ದಾಳಿಯಲ್ಲಿ ಧ್ವಂಸ ಮಾಡಿತ್ತು.ಇದೀಗ ಇರಾನ್ ಅಮೆರಿಕದ ಫಿಫ್ಟ್ ಫ್ಲೀಟ್ ಮೇಲೆ ಎರಗಿದೆ.

ಕಳೆದ ತಿಂಗಳು, ಫೆಬ್ರುವರಿ 28ರಂದು ಕೂಡ ಇದೇ ಫಿಫ್ತ್ ಫ್ಲೀಟ್ ಹೆಡ್​ಕ್ವಾರ್ಟರ್ಸ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಬ್ಯಾಲಿಸ್ಟಿಕ್ ಮಿಸೈಲ್​ಗಳು ಮತ್ತು ಶಾಹಿದ್-136 ಡ್ರೋನ್​ಗಳಿಂದ ದಾಳಿ ಮಾಡಲಾಗಿತ್ತು.

ಫಿಫ್ತ್ ಫ್ಲೀಟ್ ಅಮೆರಿಕದ ಹಡಗುಗಳ ಪಡೆಗಳಲ್ಲಿ ಒಂದಾಗಿದ್ದು, ಫಸ್ಟ್ ಫ್ಲೀಟ್, ಸೆಕೆಂಡ್ ಫ್ಲೀಟ್, ಥರ್ಡ್ ಫ್ಲೀಟ್, ಹೀಗೆ 12 ಫ್ಲೀಟ್​ಗಳಿವೆ. ಕೆಲವು ಸಕ್ರಿಯವಾಗಿವೆ, ಕೆಲವು ನಿಷ್ಕ್ರಿಯಗೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !