ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ IPL 2025 ಸೀಸನ್-18ರ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಬಿದ್ದಿದ್ದಾರೆ.
ಕಾಮೆಂಟರಿ ವೇಳೆ ಇರ್ಫಾನ್ ಪಠಾಣ್ ಕೆಲ ಆಟಗಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ಟೀಕಾತ್ಮಕ ಕಾಮೆಂಟ್‌ಗಳು ವೈಯಕ್ತಿಕ ಪ್ರೇರಿತವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಐಪಿಎಲ್ 2025ರ ಕಾಮೆಂಟ್ರಿ ಪ್ಯಾನೆಲ್‌ನಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಪಠಾಣ್ ಕೆಲವು ಭಾರತೀಯ ಆಟಗಾರರ ವಿರುದ್ಧ ಮಾತನಾಡಿದ್ದರಿಂದ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡಲಾಗಿದೆ. ಪಠಾಣ್ ಅವರ ವ್ಯಾಖ್ಯಾನದ ಬಗ್ಗೆ ಕೆಲವು ಆಟಗಾರರು ದೂರು ನೀಡಿದ್ದರು. ಈ ಆಟಗಾರರು ಇರ್ಫಾನ್ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಬಿಸಿಸಿಐ ಅವರನ್ನು ಈ ಬಾರಿಯ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್ಗೆ ಪರಿಗಣಿಸದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸಂಜಯ್ ಮಂಜ್ರೇಕರ್ ವಿರುದ್ಧ ಕೂಡ ಇಂತಹದ್ದೇ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅವರನ್ನು ಕೆಲ ವರ್ಷಗಳ ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡಲಾಗಿತ್ತು.