ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಯೋಸೈಟಿಸ್ ಚಿಕಿತ್ಸೆಗೆಂದು ವಿದೇಶದಲ್ಲಿರುವ ಸಮಂತಾ, ಇದೀಗ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಆಂಗ್ಲ ಔಷಧ ಬಳಸುತ್ತಲೇ, ಪ್ರಕೃತಿಯ ಮೊರೆ ಹೋಗಿದ್ದಾರೆ. ಸಿನಿಮಾದಿಂದ ಬಿಡುವು ಮಾಡಿಕೊಂಡ ನಂತರ ಸಮಂತಾ ಅನೇಕ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ.
ಮೊದಲಿಗೆ ಕೊಯಮತ್ತೂರು ಇಶಾ ಫೌಂಡೇಶನ್‌ಗೆ ತೆರಳಿದ ಸಮಂತಾ ಕೆಲವು ದಿನ ಧ್ಯಾನ ಮಾಡಿ ಶಾಂತಿಗಾಗಿ ಪ್ರಾರ್ಥಿಸಿ, ಬಳಿಕ ಇಂಡೋನೇಷ್ಯಾದ ಬಾಲಿಗೆ ತೆರಳಿ ಬೀಚ್ ಹಾಗೂ ಪ್ರಕೃತಿಯಲ್ಲಿ ಕಾಲ ಕಳೆದಿದ್ದಾರೆ. ಅದರ ನಂತರ ಅವರು ಅಮೆರಿಕಕ್ಕೆ ಹೋದರು ಮತ್ತು ಅಲ್ಲಿ ಅವರು ನ್ಯೂಯಾರ್ಕ್ನ ಸ್ಥಳಗಳನ್ನು ಆನಂದಿಸಿದರು. ಇತ್ತೀಚೆಗಷ್ಟೇ ಸಮಂತಾ ಎರಡು ವಾರಗಳ ಹಿಂದೆ ಅಮೆರಿಕದಿಂದ ಯುರೋಪ್‌ನ ಆಸ್ಟ್ರಿಯಾಕ್ಕೆ ಹೋಗಿದ್ದರು.
ಕಳೆದ ಎರಡು ವಾರಗಳಿಂದ ಆಸ್ಟ್ರಿಯಾದ ಸೆಲ್ಜ್‌ಬರ್ಗ್ ನಗರದಲ್ಲಿ ಎಂಜಾಯ್ ಮಾಡುತ್ತಿರುವ ಅವರು ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಆಸ್ಟ್ರಿಯಾದಿಂದ ಇಟಲಿಗೆ ಹೋಗಿದ್ದು, ವೆನಿಸ್‌ನ ಸ್ಥಳಗಳಿಗೆ ಭೇಟಿ ಕೊಟ್ಟದ್ದಾರೆ. ವೆನಿಸ್‌ನ ಅನೇಕ ಸ್ಥಳಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಸಮಂತಾ ಯಾವುದೋ ಸಾಲಿನಲ್ಲಿ ನಿಂತಿದ್ದರು. ಆ ಫೋಟೋವನ್ನೂ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸಮಂತಾ ಇಟಲಿಯಲ್ಲಿ ನೆಲೆಸಿದ್ದಾರೆ.
ಹೀಗೆ ದೇಶ-ದೇಶಗಳನ್ನು ಸುತ್ತುತ್ತಿರುವ ಸಮಂತಾ ವಿಶ್ವ ಪರ್ಯಟನೆಗೆ ಹೋದರೆ ಅಚ್ಚರಿ ಪಡಬೇಕಿಲ್ಲ ಎಂಬುದು ಅಭಿಮಾನಿಗಳು, ನೆಟ್ಟಿಗರ ಅಭಿಪ್ರಾಯ.