ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಡಿವೋರ್ಸ್ ಇದೀಗ ಹಳೆ ಸುದ್ದಿ.
18 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಅಂತ್ಯ ಹಾಡಿದ್ದು, ಧನುಷ್ ಪೋಷಕರು ಹಾಗೂ ಐಶ್ವರ್ಯಾ ಪೋಷಕರಿಗೆ ಇನ್ನೂ ನಂಬೋಕೆ ಸಾಧ್ಯವಾಗಿಲ್ಲಂತೆ.
ಡಿವೋರ್ಸ್ ನಂತರವೂ ಸಾಕಷ್ಟು ಬಾರಿ ಒಟ್ಟಿಗೇ ಕಾಣಿಸಿರೋ ಜೋಡಿ ನೋಡಿ, ಜನ ಇವರಿಬ್ಬರು ಮತ್ತೆ ಒಂದಾಗ್ತಾರೆ ಎಂದು ಅಂದುಕೊಂಡಿದ್ದಾರೆ. ರಜನಿಕಾಂತ್ ಕೂಡ ಈ ಡಿವೋರ್ಸ್ ಸುದ್ದಿಯಿಂದ ತೀವ್ರ ಬೇಸರ ಅನುಭವಿಸಿದ್ದು, ಇವರಿಬ್ಬರನ್ನು ಕೂರಿಸಿ ರಾಜಿ ಮಾಡಿಸೋ ಯತ್ನ ನಡೆಸುತ್ತಿದ್ದಾರಂತೆ.
ಇಷ್ಟು ವರ್ಷಗಳ ದಾಂಪತ್ಯ ಹೀಗೆ ಕ್ಷಣದಲ್ಲಿ ಕೊನೆಯಾಗೋಕೆ ಸಾಧ್ಯವಿಲ್ಲ ಎಂದು ಪೋಷಕರು ನಂಬಿದ್ದು, ಎರಡೂ ಕುಟುಂಬದವರನ್ನು ಕೂರಿಸಿ ರಾಜಿ ಮಾಡಲಿದ್ದಾರಂತೆ.