ಪ್ರಾರ್ಥನಾ ಮಂದಿರಗಳ‌ ಧ್ವನಿವರ್ಧಕ ತೆರವುಗೊಳಿಸಬೇಕು: ನಾರಾಯಣಸಾ ಭಾಂಡಗೆ ಒತ್ತಾಯ

ದಿಗಂತ ವರದಿ ಬಾಗಲಕೋಟೆ :

ಪ್ರಾರ್ಥನಾ ಮಂದಿರಗಳ‌ ಮೇಲೆ ಅಳವಡಿಸುವ ಧ್ವನಿವರ್ಧಕ ಗಳನ್ನು ತೆರವುಗೊಳಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಒತ್ತಾಯಿಸಿದರು.
ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು , ನಾನು ಹೋರಾಟದ ಮೂಲಕ ಬಂದವನು ಹೀಗಾಗಿ ಬಾಗಲಕೋಟೆಯಿಂದ ಈ ಹೋರಾಟ ನಡೆಸಲು ಸಿದ್ದತೆ ನಡೆಸಿದ್ದೇನೆ ಎಂದರು.
ಮಸೀದಿಗಳ ಮೇಲೆ ಇರುವ ಧ್ವನಿವರ್ಧಕ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಪ್ರಕಾರ ತೆರವುಗೊಳಿಸಬೇಕು. ತೆರವುಗೊಳಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲು ಹಿಂದೆ ಸರಿಯುವುದಿಲ್ಲ ಎಂದರು.
ನಾನು ಸಂಬಂಧಪಟ್ಟ ಸರ್ಕಾರದವರ ಗಮನಕ್ಕೆ ತರುತ್ತೇನೆ. ನಾನು ಕೈಗೊಳ್ಳುವ ಹೋರಾಟ ತಾರ್ಕಿಕ ಅಂತ್ಯಕ್ಕೆ ಮುಟ್ಟುವವರಿಗೂ ನಾನು ಹೋರಾಟ ಕೈ ಬಿಡುವುದಿಲ್ಲ.
ನಾನು ಎಷ್ಟೋ ಬಾರಿ ಹೋರಾಟದಿಂದ ಜೈಲುವಾಸ ಅನುಭವಿಸಿ ಬಂದವನು ನಾನು.‌ಅಧಿಕಾರಕ್ಕಾಗಿ ಪಕ್ಷ ಸೇರಿದವನಲ್ಲ , ಪಕ್ಷ ಕಟ್ಟಿ ಬೆಳೆಸಿದವನು ನಾನು. ನನ್ನ ಹೋರಾಟಕ್ಕೆ ಕೆಲವರು ನಮ್ಮವರು ವಿರೋಧ ಮಾಡಬಹುದು ಆದರೆ ಅದನ್ನು ಲೆಕ್ಕಿಸದೇ ನಾನು ಹೋರಾಟ ಮಾಡುವೆ ಎಂದರು.
ಹಿಂದೂ ಬಹುಸಂಖ್ಯೆ‌ಜನ , ಹಿಂದೂ ಗಟ್ಟಿಯಾಗಿ ಇರುತ್ತಾರೆ ಅಲ್ಲಿ ದೇಶ ಗಟ್ಟಿಯಾಗಿ ಇರುತ್ತದೆ. ಹಿಂದೂ ಧರ್ಮದ‌ ವಿರೋಧಿಗಳಿಗೆ ಅವಕಾಶ ಕೊಡಬಾರದು. ಸಮಾಜವನ್ನು ,‌ಮಠ ಮಂದಿರಗಳ ಕುರಿತು ಹಿಯಾಳಿಸುವ ಧೈರ್ಯ ಯಾರೂ ಮಾಡಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!