ಮಕ್ಕಳಿಗೆ ತಾಯಿ ಎಷ್ಟು ಮುಖ್ಯವೋ ತಂದೆ ಕೂಡ ಅಷ್ಟೇ ಮುಖ್ಯ. ಅಮ್ಮ ಕೈ ತುತ್ತು ನೀಡುವವಳಾದರೆ, ಅಕ್ಕಿಗಾಗಿ ದುಡಿಯುವವರು ತಂದೆ! ಈಗೆಲ್ಲ ಸಮಯ ಬದಲಾಗಿದೆ. ತಂದೆಯೂ ಮಕ್ಕಳಿಗೆ ತಿನ್ನಿಸುತ್ತಾರೆ, ತಾಯಿಯೂ ಹೊರಗೆ ಹೋಗಿ ದುಡಿಯುತ್ತಾರೆ. ಆದರೆ ಕೆಲವು ಗಂಡಸರು ತಾವು ಆಫೀಸಿಗೆ ಹೋಗಿ ಚೆನ್ನಾಗಿ ದುಡಿದು ಮಕ್ಕಳ ಭವಿಷ್ಯಕ್ಕಾಗಿ ಹಣ ಕೂಡಿಟ್ಟರೆ ಸಾಕು, ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಾರೆ. ಈ ವಿಷಯ ಬದಲಾಗಬೇಕು. ಮಕ್ಕಳಿಗೆ ತಂದೆ ಎಂದರೆ ಹಣ ತರುವ ವ್ಯಕ್ತಿ ಎಂದಷ್ಟೇ ಅನಿಸಬಾರದು. ಅದಕ್ಕಾಗಿ ತಂದೆಯಂದಿರು ಹೀಗೆ ಮಾಡಿ..
ಮಕ್ಕಳಿಗೆ ಬಟ್ಟೆ, ಚಪ್ಪಲಿ, ಊಟ, ಶಾಲೆ ಇದೆಲ್ಲವೂ ನಿಮ್ಮದೊಂದೇ ಜವಾಬ್ದಾರಿ ಎಂದುಕೊಳ್ಳಬೇಡಿ. ಪತ್ನಿಯೂ ನಿಮ್ಮ ಜೊತೆ ಹಣಕಾಸನ್ನು ಶೇರ್ ಮಾಡಲಿ. ಮಕ್ಕಳು ಎಮೋಷನ್ಸ್ ಹಾಗೂ ಜೀವನದಲ್ಲಿ ನಂಬಿಕೆಯ ಅಂಶ ಮಕ್ಕಳು ತಂದೆಯಿಂದಲೇ ಕಲಿಯುತ್ತಾರೆ.
ನೀವು ಕೋಟಿ ಕೋಟಿ ದುಡಿಯಿರಿ. ನಿಮ್ಮ ಹಣದಲ್ಲಿ ಮಕ್ಕಳು ಎಂಜಾಯ್ ಮಾಡುತ್ತಾರೆ. ಲಕ್ಷುರಿ ಪಡೆಯುತ್ತಾರೆ. ಆದರೂ ಅವರಿಗೆ ಇದರ ಬಗ್ಗೆ ಕೃತಜ್ಞತೆ ಇರುವುದಿಲ್ಲ. ಶಾಲೆಯ ಬಳಿ ಮಗನನ್ನು ಕರೆದುಕೊಂಡು ಹೋಗಲು ಬರುವ ಮಿಡಲ್ ಕ್ಲಾಸ್ ತಂದೆಯನ್ನು ನೋಡಿ ನಮ್ಮಪ್ಪನೂ ಹೀಗೇ ಇರಬೇಕಿತ್ತು ಎಂದು ಮಕ್ಕಳು ಹೇಳುತ್ತಾರೆ. ಏಕೆಂದರೆ ನಿಮ್ಮ ಕಷ್ಟ, ಸ್ಟ್ರಗಲ್ಸ್, ಪ್ರೀತಿ ಯಾವುದೂ ಮಕ್ಕಳಿಗೆ ಗೊತ್ತೇ ಇಲ್ಲ.
ತಂದೆಯ ಜೊತೆ ಒಡನಾಟ ಹೊಂದಿಲ್ಲದ ಮಕ್ಕಳಿಗೆ ಭವಿಷ್ಯದಲ್ಲಿ ಕೋಪ, ಕಿರಿಕಿರಿ ಮಾಡುವ ಬಿಹೇವಿಯರ್, ಜನರಿಂದ ದೂರ ಒಂಟಿ ಇರಲು ಬಯಸುತ್ತಾರೆ. ತಂದೆಯ ಜೊತೆ ಹೆಚ್ಚು ಸಮಯ ಕಳೆಯುವ ಮಕ್ಕಳಲ್ಲಿ ಎಮೋಷನಲ್ ಸ್ಟಬಿಲಿಟಿ ಇರುತ್ತದೆ.
ಅಪ್ಪನ ಹಣ ಮುಖ್ಯವೇ ಆದರೆ ಅಪ್ಪನ ಸಮಯವೂ ಅದರಷ್ಟೇ ಮುಖ್ಯ. ಹೆಚ್ಚು ಸಮಯ ಬೇಡ ಅರ್ಧ ಗಂಟೆ ಕ್ವಾಲಿಟಿ ಸಮಯ ನೀಡುವುದು ನಿಮ್ಮ ಆದ್ಯತೆ ಆಗಿರಲಿ. ಶಾಲೆಯಿಂದ ಬಂದ ಮಕ್ಕಳಿಗೆ ನಿಮ್ಮ ದಿನ ಹೇಗಿತ್ತು ಎಂದು ಕೇಳುವುದು. ಅವರ ಹೋಮ್ ವರ್ಕ್ ನೋಡಿ ಅಪ್ರಿಷಿಯೇಟ್ ಮಾಡುವುದು ಬೆಟರ್.
ಹಣಕಾಸಿನ ಒತ್ತಡ, ಕಂಪನಿ ಬದಲಾವಣೆ, ಕೆಲಸ ಹೋಗುವ ಭೀತಿ ನಡುವೆ ಮಕ್ಕಳು ಯಾವಾಗ ದೊಡ್ಡವರಾದ್ರೋ ತಿಳಿಯುವುದೇ ಇಲ್ಲ. ವರ್ಷಗಳು ಕಳೆಯುತ್ತಾ ನಿಮ್ಮ ಮಕ್ಕಳ ವ್ಯಕ್ತಿತ್ವ ನಿಮಗೆ ಗೊತ್ತಿರುವುದಿಲ್ಲ. ಅಪ್ಪ ಎಂಥ ವ್ಯಕ್ತಿ ಎಂದು ಮಕ್ಕಳಿಗೆ ಗೊತ್ತಾಗೋದಿಲ್ಲ.
ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ತಮ್ಮ ತಂದೆಯನ್ನು ನೋಡುತ್ತಾ ಬೆಳೆಯುವಾಗ ನನ್ನ ಪತಿಯೂ ನಮ್ಮ ತಂದೆಯ ರೀತಿ ಇರಬೇಕು ಎಂದುಕೊಳ್ಳುತ್ತಾರೆ. ತಂದೆ ಸಮಯ ನೀಡದಿದ್ದರೆ ಪತಿ ಹೇಗಾದರೂ ಇರಲಿ ಆದರೆ ಅಪ್ಪನ ರೀತಿ ಇರೋದು ಬೇಡ ಎಂದುಕೊಳ್ಳುತ್ತಾರೆ. ಇನ್ನು ಗಂಡು ಮಕ್ಕಳಾದರೆ ತಂದೆ ಮಾಡುವುದು ಸರಿ ಎಂದುಕೊಳ್ಳುತ್ತಾರೆ. ಮುಂದೆ ತಮ್ಮ ಪತ್ನಿ ಹಾಗೂ ಮಕ್ಕಳಿಗೆ ಸಮಯ ಕೊಡದೇ ಹಣ ಸಂಪಾದನೆ ಮಾಡುವುದೇ ಗುರಿ ಎಂದುಕೊಳ್ಳುತ್ತಾರೆ. ಮಕ್ಕಳಿಗೆ ನೀವು ರೋಲ್ ಮಾಡೆಲ್ ಎನ್ನುವುದು ನೆನಪಿರಲಿ.
ಮಕ್ಕಳಿಗೆ ಕಷ್ಟ ಬರಲಿ, ಸಮಸ್ಯೆ ಬರಲಿ ಮೊದಲು ಅವರು ತಂದೆಯ ಬಳಿ ಬರುವಂತೆ ಇರಬೇಕು. ಅಪ್ಪನ ಬಗ್ಗೆ ಗೌರವ, ಪ್ರೀತಿ ಬರುವಂತೆ ನಡೆದುಕೊಳ್ಳುವುದು ನಿಮ್ಮದೂ ಜವಾಬ್ದಾರಿಯಾಗಿದೆ. ಫೋನ್ ನೋಡುವುದು, ಮೀಟಿಂಗ್ ನಡೆಸುತ್ತಲೇ ಇರುವುದು, ಕ್ವಾಲಿಟಿ ಸಮಯ ಕಳೆಯದೇ ಇರುವುದು ಒಳ್ಳೆಯದಲ್ಲ. ದುಡಿಯುವುದು, ಮನೆಗೆ ಹಣ ನೀಡುವುದು, ಕುಳಿತಲ್ಲೇ ಕುಳಿತು ಟೈಮ್ ಪಾಸ್ ಮಾಡಿದ್ರೆ ನೀವೊಬ್ಬ ಉತ್ತಮ ತಂದೆ ಆಗಲು ಸಾಧ್ಯವಿಲ್ಲ.



