ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಚ್ಡಿ ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದೆಯಾ? ಏನೇನೋ ಮಾತಾಡಿದ್ರೆ ಸುಮ್ನೆ ಇರೋಕಾಗತ್ತಾ? ಸತ್ಯ ಹರಿಶ್ಚಂದ್ರನ ಮೊಮ್ಮಗನಾ ಅವರು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.
ಕಾಂಗ್ರೆಸ್ ಹತ್ತು ಸಾವಿರ ರೂಪಾಯಿ ಗಿಫ್ಟ್ ಕಾರ್ಡ್ ಹಂಚುತ್ತಿದೆ ಎಂದು ಎಚ್ಡಿಕೆ ಆರೋಪಿಸಿದ್ದು, ಅದಕ್ಕೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಜೆಡಿಎಸ್ ಸೇರಿ ಏನೆಲ್ಲಾ ಹಂಚ್ತಾ ಇದೆ ತೋರಿಸ್ಬೇಕಾ? ನಾನೇನು ಅಂತ ಜನಕ್ಕೆ ಗೊತ್ತು. ನಾವು ಹಂಚುತ್ತಿರೋದು ಪ್ರಣಾಳಿಕೆ ಕಾರ್ಡ್. ಕುಮಾರಸ್ವಾಮಿ ಏನು ಹಂಚ್ತಿದ್ದಾರೆ ಅಂತ ನಮಗೆ ಗೊತ್ತು ಎಂದು ಹೇಳಿದ್ದಾರೆ.