ಮಕ್ಕಳಿಗೆ ಸುರಕ್ಷತೆ ಬಗ್ಗೆ ಹೇಳಿಕೊಡೋಕೆ ಕಷ್ಟವಾಗ್ತಿದ್ಯಾ? ಇಲ್ಲಿದೆ ಕೆಲವು ಸಲಹೆ..

ಮಕ್ಕಳಿಗೆ ಯಾವುದು ತಪ್ಪು ಯಾವುದು ಸರಿ ತಿಳಿಹೇಳುವುದು ತುಂಬಾನೇ ಕಷ್ಟ. ಅವರಿಗೆ ಸಾವಿರ ಪ್ರಶ್ನೆಗಳಿರುತ್ತವೆ. ಸುರಕ್ಷತೆ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕಾದ್ದು ತುಂಬಾ ಮುಖ್ಯ. ಅವರಿಗೆ ಎಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು? ಅಪರಿಚಿತರ ಜೊತೆ ಹೇಗಿರಬೇಕು? ಎಲ್ಲವನ್ನೂ ಹೀಗೆ ಕಲಿಸಿ..

  • ತಮಾಷೆಯಾದ, ಮಕ್ಕಳ ಮಾತನ್ನೂ ಬಳಸಿಕೊಂಡು ಉದಾಹರಣೆಗಳ ಜೊತೆ ಮಕ್ಕಳಿಗೆ ತಿಳಿಹೇಳಿ
  • ಯಾರಾದರೂ ನಿಮಗೆ ಕೆಡುಕು ಮಾಡಲು ಬಂದಾಗ ಹೇಗೆ ರಿಯಾಕ್ಟ್ ಬೇಕು, ಮನೆಯಲ್ಲೇ ನಾಟಕ ರೀತಿ ಮಾಡಿ ತೋರಿಸಿ
  • ಪದೇ ಪದೆ ಸೇಫ್ಟಿ ನಿಯಮಗಳನ್ನು ಹೇಳುತ್ತಿರಿ. ಒಂದು ಬಾರಿ ಹೇಳಿ ಸುಮ್ಮನಾಗಬೇಡಿ. ಹೇಳುತ್ತಲೇ ಇದ್ದರೆ ಮನಸ್ಸಿನಲ್ಲಿ ಉಳಿಯುತ್ತದೆ.
  • ಸುರಕ್ಷಿತವಾಗಿ ಆಟ ಆಡುವಂತೆ ನೋಡಿಕೊಳ್ಳಿ. ಅವರ ಜೊತೆ ನೀವು ಆಟ ಆಡಿ ಸುರಕ್ಷಿತವಾಗಿ ಆಡುವಂತೆ ತಿಳಿಸಿ
  • ಅಪರಿಚಿತರ ಜೊತೆ ಮಾತನಾಡುವುದು ಬೇಡ, ಅಪ್ಪ ಅಮ್ಮ ಜೊತೆಗಿದ್ದಾಗ ಮಾತ್ರ ಬೇರೆಯವರೊಂದಿಗೆ ಮಾತನಾಡಲು ತಿಳಿಸಿ.
  • ರಸ್ತೆ ದಾಟುವಾಗ ದೊಡ್ಡವರು ಜೊತೆಗಿರಲಿ
  • ಬೆಂಕಿಯ ಜೊತೆ ಎಂದಿಗೂ ಆಟ ಆಡುವುದು ಬೇಡ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!