February 15, 2026
Sunday, February 15, 2026
spot_img

ಇದೆಂಥಾ ವಿಚಿತ್ರ?! ಟೀಚರ್‌ ಪ್ರೀತಿ ಒಪ್ಪಿಕೊಂಡಿಲ್ಲ ಎಂದು ತುಟಿ ಕಚ್ಚಿ ಕತ್ತರಿಸಿದ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಜೀವನವನ್ನೇ ಹಾಳು ಮಾಡಿದ್ದಾನೆ. ಶಿಕ್ಷಕಿ ತನ್ನ ಪ್ರೀತಿಗೆ ಒಪ್ಪಿಗೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ತುಟಿಯನ್ನು ಕಚ್ಚಿ ಕತ್ತರಿಸಿದ್ದಾನೆ.

ಉತ್ತರಪ್ರದೇಶದ ಮೈನ್‌ಪುರಿಯಲ್ಲಿ ಈ ಘಟನೆ ನಡೆದಿದೆ. ಬರೀ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಅಖಂಡ್‌ ಪ್ರತಾಪ್‌ ಸಿಂಗ್‌ ಕಾಲೇಜಿನಲ್ಲಿ ತನ್ನ ಶಿಕ್ಷಕಿಗೆ ಕಿರುಕುಳ ನೀಡಿದ್ದಾನೆ. ಶಿಕ್ಷಕಿಯ ಕುಟುಂಬದವರು ವಾರ್ನಿಂಗ್‌ ನೀಡಿದ ಬಳಿಕ ಆತ ಸುಮ್ಮನಾಗಿದ್ದ.

ಕೆಲ ದಿನಗಳ ನಂತರ ಮತ್ತೆ ಶಿಕ್ಷಕಿಯನ್ನು ಹಿಂಬಾಲಿಸುವುದು, ಆಕೆಗೆ ಕಿರುಕುಳ ಕೊಡಲು ಆರಂಭಿಸಿದ್ದ. ಈತನ ಕಿರುಕುಳಕ್ಕೆ ನೊಂದ ಶಿಕ್ಷಕಿ ಕಾಲೇಜನ್ನೇ ಬದಲಾಯಿಸಿದ್ದರು. ಬೇರೆ ಕಡೆ ಕೆಲಸಕ್ಕೆ ಸೇರಿದ್ದರು.

ಅಲ್ಲಿಗೂ ಬಂದು ಟಾರ್ಚರ್‌ ನೀಡಿದ್ದ ವಿದ್ಯಾರ್ಥಿ, ಶಿಕ್ಷಕಿ ಮನೆಗೆ ಹೋಗುವ ವೇಳೆ ಆಕೆಯ ಹತ್ತಿರ ಬಂದು ಎರಡೂ ತುಟಿಯನ್ನು ಕಚ್ಚಿದ್ದಾನೆ. ತುಟಿಯ ಭಾಗ ನೆಲಕ್ಕೆ ಬಿದ್ದಿದೆ. ಇದೀಗ ಆಗ್ರಾದ ಆಸ್ಪತ್ರೆಯಲ್ಲಿ ಶಿಕ್ಷಕಿಯನ್ನು ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ತನ್ನ ಪ್ರೀತಿಯನ್ನು ಒಪ್ಪಲಿಲ್ಲ, ಅನೈತಿಕ ಸಂಬಂಧಕ್ಕೆ ರಾಜಿ ಆಗಿಲ್ಲ ಎನ್ನುವ ಕಾರಣಕ್ಕೆ ಈ ಕೆಟ್ಟ ಕೆಲಸ ಮಾಡಿದ್ದಾರೆ.

ಶಿಕ್ಷಕಿಯ ಸಹೋದರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !