ಚಹಾ ಅಥವಾ ಕಾಫಿಗೆ ಸಕ್ಕರೆ ಹಾಕುವ ಬದಲು ಜೇನುತುಪ್ಪ ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಹೆಚ್ಚಿನವರು ಹೇಳ್ತಾರೆ. ಆದರೆ ನೈಸರ್ಗಿಕವಾದದ್ದು ಅಂದ್ರೆ ಸಕ್ಕರೆಗಿಂತ ಫುಲ್ ಸುರಕ್ಷಿತ ಅನ್ನೋದು ಸರಿಯಾಗಲ್ಲ. ಜೇನುತುಪ್ಪಕ್ಕೂ ಸಕ್ಕರೆಯಂತೆಯೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವಿದೆ.
ಜೇನುತುಪ್ಪದಲ್ಲಿ ಏನಿದೆ?
ಜೇನುತುಪ್ಪದಲ್ಲಿ ಸಣ್ಣ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಇತರ ಸಂಯುಕ್ತಗಳಿವೆ. ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ ಪೌಷ್ಟಿಕ ಗುಣಗಳನ್ನು ಹೊಂದಿದ್ದರೂ, ಜೇನುತುಪ್ಪ ಕೂಡ ಮುಖ್ಯವಾಗಿ ಸಕ್ಕರೆಯೇ. ಹೀಗಾಗಿ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ.
ಇದನ್ನೂ ಓದಿ:
ಮಧುಮೇಹಿಗಳು ಜೇನುತುಪ್ಪ ತಿನ್ನಬಹುದಾ?
ಮಧುಮೇಹ ಇರುವವರು ಜೇನುತುಪ್ಪವನ್ನು ಮುಕ್ತವಾಗಿ ಅಥವಾ ಸಕ್ಕರೆಗೆ ಬದಲಿಯಾಗಿ ಬೇಕಾದಷ್ಟು ಸೇವಿಸಬಾರದು. ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡರೂ ಅದನ್ನು ದಿನದ ಒಟ್ಟು ಕಾರ್ಬೋಹೈಡ್ರೇಟ್ ಸೇವನೆಯ ಭಾಗವಾಗಿ ಪರಿಗಣಿಸಬೇಕು.
ಸಕ್ಕರೆಗಿಂತ ಉತ್ತಮನಾ ?
ಜೇನುತುಪ್ಪವನ್ನು ಸಕ್ಕರೆಗಿಂತ ಆರೋಗ್ಯಕರ ಎಂದು ಹೇಳುವುದು ಅರ್ಧಸತ್ಯ. ಕೆಲವು ಪೌಷ್ಟಿಕ ಅಂಶಗಳಿದ್ದರೂ, ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ದೃಷ್ಟಿಯಿಂದ ಎರಡನ್ನೂ ಮಿತಿಯಲ್ಲಿ ಬಳಸುವುದು ಮುಖ್ಯ.
ಒಟ್ಟಾರೆ ಮಧುಮೇಹಿಗಳಿಗೆ ಜೇನುತುಪ್ಪ “ಸೇಫ್ ಫುಡ್” ಅಲ್ಲ; ಪ್ರಮಾಣವೇ ಮುಖ್ಯ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಔಷಧಿಗಳ ಆಧಾರದ ಮೇಲೆ ಎಷ್ಟು ತೆಗೆದುಕೊಳ್ಳಬಹುದು ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಉತ್ತಮ.



