ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್:‌ ಸೇನಾ ನೆಲೆಗಳು ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧಾತಂಕದ ಸಂದರ್ಭದಲ್ಲಿ ಇಸ್ರೇಲ್‌ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಈ ಬಗ್ಗೆ ಸಿರಿಯಾ ಮಿಲಿಟಿರಿ ಮಾಹಿತಿ ನೀಡಿದ್ದು, ಇಸ್ರೇಲ್‌ ಆಕ್ರಮಿತ ಸಿರಿಯಾದ ಗೋಲನ್‌ ಹೈಟ್ಸ್‌ ನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಈ ರೀತಿ ದಿಢೀರ್‌ ದಾಳಿಯಿಂದ ಸಿರಿಯಾದ ಸೇನಾ ನೆಲೆಗಳು ಧ್ವಂಸಗೊಂಡಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದೆ.
ಹಲವು ದಶಕಗಳಿಂದ ಉಭಯ ದೇಶಗಳ ನಡುವೆ ದಾಳಿಗಳು ನಡೆಯುತ್ತಿದೆ. ಆದರೆ ಇಂದು ನಡೆದ ಈ ಕ್ಷಿಪಣಿ ದಾಳಿಯ ಕುರಿತು ಇಸ್ರೇಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ 1967ರಲ್ಲಿ ನಡೆದ ಯುದ್ಧದಲ್ಲಿ ಇಸ್ರೇಲ್‌ ಗೋಲನ್‌ ಹೈಟ್ಸ್‌ ಅನ್ನು ವಶಪಡಿಸಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!