ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಅಮೆರಿಕ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹೊಡೆದುರುಳಿಸಿದೆ. ಇದಕ್ಕೆ ಪ್ರತೀಕವಾಗಿ ಇರಾನ್ ಕೂಡ ದಾಳಿ ನಡೆಸಿದ್ದು, ದುಬೈ ಮತ್ತು ಕತಾರ್‌ನ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಕೆಲವೊಂದು ಸ್ಥಳದಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿದೆ.
ಈ ಯುದ್ಧದ ಕಾರ್ಮೋಡದ ಮದ್ಯೆ ಬಾಬಾ ವಂಗಾ ಅವರ ಭವಿಷ್ಯವಾಣಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಲ್ಗೇರಿಯಾದ ಅಂಧ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2026ರ ಆರಂಭದಲ್ಲೇ ಪೂರ್ವ ದೇಶಗಳಿಂದ ದೊಡ್ಡ ಮಟ್ಟದ ಯುದ್ಧವೊಂದು ಆರಂಭವಾಗಲಿದೆ. ಈ ಸಂಘರ್ಷವು ವಿಶ್ವದ ಪಶ್ಚಿಮ ಭಾಗಗಳನ್ನು ತೀವ್ರವಾಗಿ ಬಾಧಿಸುವ ನಿರೀಕ್ಷೆಯಿದೆ. ಯುರೋಪ್ ಈ ವಿನಾಶದ ಭಾರವನ್ನು ಹೊತ್ತುಕೊಳ್ಳಲಿದೆ. ನಂತರದ ದಿನಗಳಲ್ಲಿ ಯುರೋಪಿನ ಭೂಮಿ ಸಂಪೂರ್ಣವಾಗಿ ಬಂಜರು ಮತ್ತು ಅಸ್ಥಿರವಾಗಬಹುದು ಎಂದು ಹಲವು ದಶಕಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ಇದೀಗ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯ ನಂತರ, ಬಾಬಾ ವಂಗಾ ಅವರ ಭವಿಷ್ಯವಾಣಿ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಈ ದೇಶಗಳ ನಡುವಿನ ಯುದ್ಧವು ಪ್ರಪಂಚದಾದ್ಯಂತ ಜನರನ್ನು ಭಯಭೀತಗೊಳಿಸಿದೆ. ಈ ಸಂಘರ್ಷದ ನಂತರ ರಷ್ಯಾ ಜಗತ್ತಿನ ಶ್ರೇಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದು ಅವರ ಭವಿಷ್ಯವಾಣಿಯಾಗಿತ್ತು. ಹೀಗಾಗಿ 2026 ರ ವರ್ಷಕ್ಕಾಗಿ ಬಾಬಾ ವಂಗಾ ಮಾಡಿದ ಭಯಾನಕ ಭವಿಷ್ಯವಾಣಿಯು ನಿಜವಾಗಿದೆ ಎಂದು ಹೇಳಲಾಗುತ್ತಿದೆ.



