ಲೈಂಗಿಕ ಶೋಷಣೆ ಆರೋಪ ಶುದ್ಧ ಸುಳ್ಳು, ಇದು ರಾಜಕೀಯ ಪ್ರೇರಿತ ಎಂದ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ತಮ್ಮ ಮೇಲೆ ಹೊರಿಸಲಾಗಿರುವ ಲೈಂಗಿಕ ಶೋಷಣೆ ಆರೋಪ ಶುದ್ಧ ಸುಳ್ಳು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಪ್ರಪಂಚದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಅವರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಅವರ ಕಂಪನಿ ಸ್ಪೇಸ್ ಎಕ್ಸ್‌ 2,50,000 ಡಾಲರ್‌ ಗಳನ್ನು ಸಂತ್ರಸ್ತೆಗೆ ಪಾವತಿ ಮಾಡಿದೆ ಎಂದು ಬಿಸ್ನೆಸ್‌ ಇನ್‌ಸೈಡರ್‌ ಇಂದು ಬೆಳಿಗ್ಗೆ ವರದಿ ಮಾಡಿತ್ತು. ಆದರೆ ಈ ಅರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಮಸ್ಕ್‌ ಇದೊಂದು ಶುದ್ಧ ಸುಳ್ಳು ಎಂದಿದ್ಧಾರೆ.

ಈ ಕುರಿತು ಮಸ್ಕ್‌ ಆಕೆಯನ್ನು ಸುಳ್ಳುಗಾರ್ತಿ ಎಂದು ಹೇಳಿರುವುದಲ್ಲದೇ ಅವಳು ಹೆಳಿರುವುದು ಸತ್ಯ ಎಂದು ಸಾಬೀತುಪಡಿಸಲು ಅಗತ್ಯವಿರುವ ಯಾವುದಾದರೂ ಒಂದು ಸಾಕ್ಷಿ ನೀಡುವಂತೆ ಟ್ವೀಟರ್‌ ನಲ್ಲಿ ಬರೆದುಕೊಂಡಿದ್ದಾರೆ. “ಇದೊಂದು ರಾಜಕೀಯ ಪ್ರೇರಿತ ಆರೋಪ. ಒಬ್ಬರ ಪ್ರಭಾವ ಕಡಿಮೆಮಾಡಲೆಂದೇ ಈ ರೀತಿ ಮಾಡಲಾಗುತ್ತದೆ. ಇಂತಹ ಯಾವುದೇ ತಡೆಗೋಡೆಗಳೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಉತ್ತಮ ಭವಿಷ್ಯತ್ತಿಗಾಗಿ ಹಾಗೂ ವಾಕ್‌ ಸ್ವಾತಂತ್ರ್ಯಕ್ಕಾಗಿ ನನ್ನ ಹೋರಾಟ ಮುಂದುವರೆಯುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!