Saturday, June 25, 2022

Latest Posts

ಕರ್ನಾಟಕದ ಕಬ್ಬಿಣ ಅದಿರು ರಪ್ತಿಗೆ ಸುಪ್ರಿಂ ಕೋರ್ಟ್‌ ಅಸ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕರ್ನಾಟಕದಲ್ಲಿ ಕಬ್ಬಿಣ ಅದಿರು ಮಾರಾಟದ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸುವಂತೆ ಸುಪ್ರಿಂ ಕೋರ್ಟ್‌ ಆದೇಶ ನೀಡಿದೆ. ಕೇಂದ್ರ ಸರ್ಕಾರದ ನಿಯಮಗಳು ಮತ್ತು ಷರತ್ತುಗಳನ್ವಯ ಕಬ್ಬಿಣದ ಅದಿರು ಮಾರಾಟಕ್ಕೆ ಸಮ್ಮತಿ ನೀಡಲಾಗಿದೆ.

ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹಾಗು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠವು “2011ರ ನಿರ್ಬಂಧದ ನಂತರ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಇ-ಸ್ವತ್ತಿನ ಮಾರಾಟವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಮಾರಾಟಕ್ಕಿರುವ ಈ ನಿಯಮಗಳಲ್ಲಿ ಸಡಿಲಿಕೆ ತರುವ ಅವಶ್ಯಕತೆಯಿದೆ” ಎಂದಿದೆ.

ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಕಬ್ಬಿಣ ಅದಿರು ಮಾರಾಟಕ್ಕೆ ಅನುಮತಿ ನೀಡಿರುವ ಕೋರ್ಟ್‌ ʼಈಗಾಗಲೇ ತೆಗೆದಿರುವ ಅದಿರನ್ನು ಕೋರ್ಟ್‌ ಮೂಲಕ ಹಾಗೂ ಇ-ಸ್ವತ್ತಿನ ಮಾರ್ಗದ ಬದಲಾಗಿ ನೇರವಾಗಿ ಮಾರಾಟ ಮಾಡಲು ಅನುಮತಿ ನಿಡಿದೆ. ಇನ್ನು ಅದಿರಿನ ಉತ್ಪಾದನೆ ಮತ್ತು ಗಣಿಕಾರಿಕೆ ಮೇಲಿನ ಮಿತಿಗಳ ಕುರಿತಾಗಿ ನ್ಯಾಯಾಲಯವು ಮೇಲ್ವಿಚಾರಣಾ ಸಮಿತಿಯ ಶಿಫಾರಸ್ಸುಗಳನ್ನು ಕೇಳಿದೆ.

ಈ ಕುರಿತು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಮೇಲ್ವಿಚಾರಣಾ ಪ್ರಾಧಿಕಾರವಾಗಿರುವ ಕೇಂದ್ರೀಯ ಸಶಕ್ತ ಸಮಿತಿ (ಸಿಇಸಿ) 2018 ರಿಂದ ಕರ್ನಾಟಕದಲ್ಲಿ ಗಣಿಗಾರಿಕೆ ಪರಿಸ್ಥಿತಿಯಲ್ಲಿ ಸುಧಾರಣೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss