October 23, 2026
Friday, October 23, 2026
spot_img

ಸುಳ್ಯ ದಸರಾ ಮೆರವಣಿ: ನಾಳೆ ರಾಷ್ಟೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

ಹೊಸದಿಗಂತ ವರದಿ ಸುಳ್ಯ:

ಶಾರದಾ ಮಾತೆಯ ವಿಗ್ರಹ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಶನಿವಾರ ಅಪರಾಹ್ನ 2 ಗಂಟೆಯಿಂದ ಭಾನುವಾರ ಪೂರ್ವಾಹ್ನ 2 ಗಂಟೆಯವರೆಗೆ ಸುಳ್ಯ ಪೇಟೆಯಲ್ಲಿ ಹಾದುಹೋಗುವ ರಾಷ್ಟೀಯ ಹೆದ್ದಾರಿ 275 ರಲ್ಲಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಬದಲಾವಣೆಗೊಳಿಸಲಾದ ಮಾರ್ಗವು ಸುಳ್ಯ ಗಾಂಧಿನಗರ ಕಡೆಯಿಂದ ಜಾಲ್ಸೂರು – ಕುಂಬ್ರ ಮಾರ್ಗವಾಗಿ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳನ್ನು ಸುಳ್ಯ ಕಟ್ಟೆ ಜಂಕ್ಷನ್ (ಪೊಲೀಸ್‌ ಠಾಣಾ ಎದುರುಗಡೆ) ನಿಂದ ಎಡಕ್ಕೆ ತಿರುಗಿ – ವಿವೇಕಾನಂದ ಸರ್ಕಲ್ – ಕಾಂತಮಂಗಲ- ಅಜ್ಜಾವರ-ಪೇರಾಲ್ – ಅಡ್ಯಾರು ಮಾರ್ಗವಾಗಿ ಅಡ್ಡಾರು ಎಂಬಲ್ಲಿ ರಾಷ್ಟೀಯ ಹೆದ್ದಾರಿ 275 ಸಂಪರ್ಕಿಸಲು ಹಾಗೂ ಸುಳ್ಯ ಪೈಚಾರು ಕಡೆಯಿಂದ ಸುಳ್ಯ ಅರಂತೋಡು -ಕಲ್ಲುಗುಂಡಿ – ಮಡಿಕೇರಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಸುಳ್ಯ ಪೈಚಾರು ಎಂಬಲ್ಲಿ ಎಡಕ್ಕೆ ತಿರುಗಿ ಸೋಣಂಗೇರಿ – ದುಗಲಡ್ಕ -ಕಂದಡ್ಕ ರಸ್ತೆ – ಉಬರಡ್ಕ ಕ್ರಾಸ್ – ಕೆಎಸ್‌ಆರ್‌ಟಿಸಿ ಡಿಪೋ ರಸ್ತೆಯಿಂದಾಗಿ ಪರಿವಾರ ಕಾನ ಎಂಬಲ್ಲಿ ರಾಷ್ಟೀಯ ಹೆದ್ದಾರಿ 275 ಸಂಪರ್ಕಿಸಿ ಸಂಚರಿಸಲು ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಹೆಚ್ .ವಿ. ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Must Read