ಅಮೇಜಾನ್‌ಗೆ ಐಟಿ ನೋಟಿಸ್:‌ 549 ಕೋಟಿ ರೂ. ತೆರಿಗೆ ಪಾವತಿಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇ-ಕಾಮರ್ಸ್‌ ದೈತ್ಯ ಅಮೇಜಾನ್‌ ನ ಅಂಗವಾದ ಅಮೇಜಾನ್‌ ವೆಬ್‌ ಸರ್ವೀಸಸ್‌ ಗೆ ಆದಾಯ ತೆರಿಗೆ (IT) ಇಲಾಖೆ ನೋಟೀಸ್‌ ನೀಡಿದ್ದು 549 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದೇಶಿಸಿದೆ.
ಕಂಪನಿಯು ಭಾರತೀಯ ಘಟಕಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ನೀಡಲು ಶುಲ್ಕವನ್ನು ವಿಧಿಸುತ್ತಿದೆ ಆದರೆ ಆ ಶುಲ್ಕದ ಮೇಲೆ ಯಾವುದೇ ತೆರಿಗೆ ಪಾವತಿಸುತ್ತಿಲ್ಲ ಎಂಬ ಆರೋಪದಡಿಯಲ್ಲಿ ಆದಾಯ ತೆರಿಗೆ ಇಲಾಖೆ ನೋಟೀಸ್‌ ಜಾರಿ ಮಾಡಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 147 ಅನ್ವಯ ಆರ್ಥಿಕವರ್ಷ 2015ಕ್ಕೆ 190.85 ಕೋಟಿ ರೂ. ಮತ್ತು ಆರ್ಥಿಕ ವರ್ಷ 2017ಕ್ಕೆ 358.27 ಕೋಟಿ ರೂ. ತೆರಿಗೆ ಪಾವತಿಸುವಂತೆ ತಿಳಿಸಲಾಗಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಉಲ್ಲೇಖಿಸಿದೆ.

ಪ್ರಸ್ತುತ ಅಮೆಜಾನ್‌ ವೆಬ್‌ಸರ್ವೀಸಸ್‌ ಗೆ ಶುಲ್ಕವಿಧಿಸಲಾಗಿದ್ದು ಬಾಕಿ ಇರುವ ತೆರಿಗೆ ಬಾಕಿಗಳ ಮೇಲಿನ ಬಡ್ಡಿಯನ್ನು ಸಹ ಒಳಗೊಂಡಿರುತ್ತದೆ ಆದರೆ ಇದು ದಂಡವಲ್ಲ ಎಂದು ಮೂಲಗಳ ವರದಿ ತಿಳಿಸಿದೆ.

“ಹಲವಾರು ಕಂಪನಿಗಳು ತೆರಿಗೆ ವಂಚನೆಗೆ ತಮ್ಮ ಮಾತೃಸಂಸ್ಥೆಗಳಿಗೆ ರಾಯಲ್ಟಿ ಪಾವತಿಯ ಹೆಸರಿನಲ್ಲಿ ಭಾರಿ ಮೊತ್ತವನ್ನು ಕಳುಹಿಸುತ್ತಿವೆ. ನಾವು ಕೆಲವು ಪ್ರಕರಣಗಳಲ್ಲಿ ನೋಟಿಸ್‌ಗಳನ್ನು ಕಳುಹಿಸಿದ್ದೇವೆ ಮತ್ತು ಹೆಚ್ಚಿನ ನೋಟಿಸ್‌ಗಳನ್ನು ಕಳುಹಿಸುವುದು ಪ್ರಕ್ರಿಯೆಯಲ್ಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!