October 9, 2026
Friday, October 9, 2026
spot_img

ʼನಿನಗೆ ರಾಜಕೀಯ ಜನ್ಮ ನೀಡಿದ್ದೇ ಬಿಜೆಪಿʼ: ನಾಗೇಂದ್ರ ವಿರುದ್ದ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ

ಹೊಸದಿಗಂತ ವರದಿ ಬಳ್ಳಾರಿ:

ನಾಗೇಂದ್ರನಿಗೆ ರಾಜಕೀಯ ಜನ್ಮ ನೀಡಿದ್ದು ಬಿಜೆಪಿ ಎನ್ನುವುದು ಮರೆತಿದ್ದಾನೆ, ನೀನು ಎಲ್ಲಿದ್ದೀ, ಏನು ಮಾಡ್ಕೊಂಡು ಇದ್ದೇ ಎನ್ನುವುದು ಈಗ ಬೇಡ, ಜನಾರ್ಧನ ರೆಡ್ಡಿ ಇಂದಲೇ ನೀನು ಶಾಸಕನಾಗಿದ್ದು ಎಂಬುದನ್ನು ಮರೀಬೇಡ, ನಮ್ಮನ್ನ ನಡೆಯದ ನಾಣ್ಯಗಳು ಅಂತೀಯಾ, ರಾಜಕೀಯಕ್ಕೆ ಜಾತಿ ಬಣ್ಣ ಬಳಸ್ತಿಯಾ, ಬಿಜೆಪಿ ಶಾಸಕನಾಗುವಾಗ ಬಿಜೆಪಿ ಮನುವಾದ ನೆನಪಾಗಲಿಲ್ಲವೇ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ ಹಾಗೂ ಸಿಬಿಐ ಎರಡು ತನಿಖಾ ಸಂಸ್ಥೆಗಳಲ್ಲಿ ಯಾರ ಆಟವೂ ನಡೆಯೋಲ್ಲ ಇಲ್ಲಿ, ಗಟ್ಟಿಯಾದ ಕಾನೂನುಗಳಿವೆ, ಇಲ್ಲಿ ಯಾರ ಶಿಫಾರಸ್ಸು ನಡೆಯಲ್ಲ, ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣದಲ್ಲಿ ನಾಗೇಂದ್ರ ಆರೋಪಿ. ಆದರೆ, ಇದರಲ್ಲಿ ನನ್ನದೇನು ಪಾತ್ರವಿಲ್ಲ ಇಲ್ಲ, ಎಂದು ಕಣ್ಣೀರಿಟ್ಟರೆ, ದೇವರು ಮೆಚ್ಚುವುದಿಲ್ಲ, ಹಗರಣದಲ್ಲಿ ನಿನ್ನ ಪಾತ್ರ ಇದ್ದೇ ಇದೇ ಎಂದು ಆರೋಪಿಸಿದರು.

ತಪ್ಪು ಮಾಡಿ ಮೊಸಳೆ ಕಣ್ಣೀರು ಹಾಕುವ ನಾಟಕ ಬೇಡ, ಹಗರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಕ್ಕೆ ನೀನು ಕಣ್ಣೀರು ಹಾಕಿದಾಗ ಶಾಂತಿ ದೊರಕಿತೇನು? ಎಂದು ಪ್ರಶ್ನೆಸಿದರು. ಪಕ್ಕದಲ್ಲಿ ದೇಶದ್ರೋಹಿ, ಪಾಕಿಸ್ತಾನ ಜಿಂದಾಬಾದ ಘೋಷಣೆಯ ಖ್ಯಾತಿಯ ನಾಸಿರ್ ಹುಸೇನ್ ಪಕ್ಕದಲ್ಲಿ  ಕೂಡಿಸಿಕೊಂಡು ಕಣ್ಣೀರು ಹಾಕ್ತಾರೆ ಅಂದ್ರೆ ಇದಕ್ಕಿಂತ ದೊಡ್ಡ ನಾಚಿಕೆಗೇಡು ಬೇರೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸಿದ ರೆಡ್ಡಿ, ನಾಗೇಂದ್ರ ಅಷ್ಟೇ ಅಲ್ಲ ಎಂ. ಪಿ.ತುಕಾರಾಂ ಸೇರಿ 10 ಶಾಸಕರು ರಾಜೀನಾಮೆ ನೀಡಬೇಕು, ಉಪ ಚುನಾವಣೆ ಎದುರಿಸಲು ನಾನು ಸಿದ್ಧ ಎಂದು ಪ್ರತಿ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನ ಗೌಡ, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಇತರರಿದ್ದರು.

Must Read