ಆತನ ಚಟಗಳೇ ಆತನಿಗೆ ಮುಳುವಾಯಿತು, ಗುರುಪ್ರಸಾದ್‌ ಬಗ್ಗೆ ಹೀಗ್ಯಾಕಂದ್ರು ಜಗ್ಗೇಶ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲಬಾಧೆಯಿಂದ ಸಾಯುತ್ತೇನೆ ಎಂದು ಗುರುಪ್ರಸಾದ್ ಈ ಹಿಂದೆ ಹೇಳಿದ್ದರು ಎಂದು ನಟ ಜಗ್ಗೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಗುರುಪ್ರಸಾದ್ ಬಗ್ಗೆ ಮಾತನಾಡಿರುವ ಜಗ್ಗೇಶ್, ಗುರುಪ್ರಸಾದ್ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಪ್ರತಿಭಾವಂತ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ. ಮಠ ಸಿನಿಮಾ ಮಾಡುವ ಪ್ರತಿ ದೃಶ್ಯವನ್ನು ಅಭಿನಯಿಸಿ ತೋರಿಸಿದ್ದ. ಆದರೆ ಯಶಸ್ಸಿನ ಬಳಿಕ ಬೆಳೆಸಿಕೊಂಡ ಚಟಗಳೇ ಆತನಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವನು ಯಾರ ಮಾತನ್ನೂ ಕೇಳಲಿಲ್ಲ. ಅವನು ಹೇಳಿದ್ದು, ಮಾಡಿದ್ದೆ ಸರಿ ಎಂದು ಸಮರ್ಥಿಸಿಕೊಂಡನು. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ವಿಪರೀತ ಡಬಲ್‌ ಮೀನಿಂಗ್‌ ಡೈಲಾಗ್‌ ಹಾಕುತ್ತಿದ್ದ. ಡಬಲ್‌ ಮೀನಿಂಗ್‌ ಡೈಲಾಗ್‌ ಬಳಸಬೇಡ ಎಂದು ಸಲಹೆ ನೀಡಿದ್ದೆ.

ಮೇಲಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿ ಜಗ್ಗೇಶ್ ಅವರ ಸಿನಿಮಾದಲ್ಲಿ ನಟಿಸಲ್ಲ ಎಂದು ಹೇಳಿದ್ದ. ಆ ದಿನ ನಾನು ತುಂಬಾ ದುಃಖಿತನಾಗಿದ್ದೆ ಎಂದು ಹೇಳಿದ್ದಾರೆ. ಒಂಟಿತನದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಗ್ಗೇಶ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!