ಐಟಮ್ಸ್ ಮಿಸ್ಸಿಂಗ್: ಡೆಲಿವರಿ ಬಾಯ್‌ಗೆ ಚಪ್ಪಲಿಯಲ್ಲಿ ಹೊಡೆತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ದಂಪತಿ ಡೆಲಿವರಿ ಬಾಯ್‌ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೆಲವು ಐಟಂಗಳು ಮಿಸ್ಸಿಂಗ್ ಆಗಿವೆ ಎಂದು ಆರೋಪಿಸಿದ ದಂಪತಿ ಡೆಲಿವರಿ ಬಾಯ್‌ಗೆ ಚಪ್ಪಲಿಯಿಂದ ಹೊಡೆದಿದ್ದು, ಡೆಲಿವರಿ ಬಾಯ್ಸ್ ಪ್ರತಿಭಟನೆ ನಡೆಸಿದ್ದಾರೆ.

ಬ್ಲಿಂಕಿಟ್ ಆಪ್ ಮೂಲಕ ಶ್ರೀನಿ ಮತ್ತು ಅವರ ಪತ್ನಿ ಗ್ರೊಸರಿಗಳನ್ನು ಆರ್ಡರ್ ಮಾಡಿದ್ದರು. ಎಂಟು ಸಾಮಾಗ್ರಿಗಳನ್ನು ಆರ್ಡರ್ ಮಾಡಿದ್ದು, ಮನೆಗೆ ಸಾಮಾನು ತಂದುಕೊಟ್ಟ ಡೆಲಿವರಿ ಬಾಯ್ ವೀರೇಶ್ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದಿದ್ದಾರೆ.

ಇರಲಿ ಪರವಾಗಿಲ್ಲ, ಮನೆಯೊಳಗೆ ಹೋಗಿ ಚೆಕ್ ಮಾಡ್ತೇವೆ ಎಂದ ದಂಪತಿ ಐಟಂ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಹೊರಬಂದು ಎರಡು ಐಟಂ ಮಿಸ್ಸಿಂಗ್ ಎಂದಿದ್ದಾರೆ. ಇದಕ್ಕೆ ಡೆಲಿವರಿ ಬಾಯ್ ನನ್ನ ಕಣ್ಣೆದುರೇ ಚೆಕ್ ಮಾಡಬಹುದಿತ್ತು ಎಂದಿದ್ದಾರೆ. ಇದಕ್ಕೆ ಕೋಪಗೊಂಡ ದಂಪತಿ ಡೆಲಿವರಿ ಬಾಯ್‌ಗೆ ಹೊಡೆದು, ಕಾಲಿನಿಂದ ಒದ್ದಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಡೆಲಿವರಿ ಬಾಯ್‌ಗಳು ಅಪಾರ್ಟ್‌ಮೆಂಟ್ ಎದುರು ಪ್ರತಿಭಟನೆ ಕುಳಿತಿದ್ದಾರೆ. ದಂಪತಿ ಕ್ಷಮೆ ಕೇಳಬೇಕು ಎಂದಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!