Wednesday, August 17, 2022

Latest Posts

ಹೊರಗೆ ಜಡಿ ಮಳೆಗೆ, ಮನೆ ಬೆಡ್ ರೂಮ್‌ನಲ್ಲಿ ಕರಡಿಯ ಗಡದ್ದು ನಿದ್ದೆ!!  

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ತ ಹೊರಗೆ ಜಡಿಮಳೆಯಾಗುತ್ತಿದ್ದರೆ, ಇತ್ತ ಕರಡಿಯೊಂದು ಸದ್ದಿಲ್ಲದೆ ಮನೆಯೊಳಗೆ ನುಗ್ಗಿ ಬೆಡ್ ರೂಮ್‌ನಲ್ಲಿ ಬೆಚ್ಚಗೆ ಮಲಗಿ ಮನೆಮಂದಿಗೆ ಶಾಕ್ ನೀಡಿದ ವಿದ್ಯಮಾನ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ನಡೆದಿದೆ!
ಈ ಭಾಗದಲ್ಲಿ ಕಳೆದ ರಾತ್ರಿಯಿಂದ ಭರ್ಜರಿ ಮಳೆಯಾಗುತ್ತಿದೆ. ಅದೆಲ್ಲಿಂದಲೋ ಬಂದ ಕರಡಿ ಇಲ್ಲಿನ ಮಂಜುಳಾ ಎಂಬವರ ನಿರ್ಮಾಣ ಹಂತದ ಮನೆಗೆ ನುಗ್ಗಿ ಮಳೆಯಿಂದ ರಕ್ಷಣೆ ಪಡೆದಿದೆ. ಮನೆ ಮಾಲಿಕರು ಬಂದು ನೋಡಿದಾಗ ಈ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅವರು ಕರಡಿಗೆ ಮತ್ತೆ ಕಾಡಿನ ದಾರಿ ತೋರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!