ಟಿ20 ರ‍್ಯಾಕಿಂಗ್ ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ಸೂರ್ಯ! ಅಗ್ರಸ್ಥಾನಿ ಬಾಬರ್‌ ಅಜಂ ಸ್ಥಾನಕ್ಕೂ ಕುತ್ತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ವೆಸ್ಟ್‌ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಬ್ಬರಿಸುತ್ತಿರುವ ಸೂರ್ಯಕುಮಾರ್ ಯಾದವ್ ಐಸಿಸಿ ಪುರುಷರ T20I ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
‌ಎರಡನೇ  ಸ್ಥಾನಕ್ಕೆ ಏರಿರುವ ಸೂರ್ಯಕುಮಾರ್ ಯಾದವ್ (816) ಸದ್ಯ, ಟಿ20 ರ್ಯಾಂಕಿಂಗ್‌ ನಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್‌ ಅಜಂ(818) ಗಿಂತ ಕೇವಲ ಎರಡು ಅಂಕಗಳಿಂದ ಹಿಂದೆ ಇದ್ದು, ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿ ಮುಕ್ತಾಯದ ವೇಳೆಗೆ ಸೂರ್ಯ ಅಗ್ರ ಸ್ಥಾನ ಗಳಿಸುವ ಸಾಧ್ಯತೆಗಳಿವೆ.
3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಿಡಿದಿದ್ದ ಸೂರ್ಯ 44 ಎಸೆತಗಳಲ್ಲಿ 76 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಮೂರು ಪಂದ್ಯಗಳಿಂದ 111 ರನ್‌ಗಳೊಂದಿಗೆ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ 3ನೇ, ಸೌತ್‌ ಆಫ್ರಿಕಾದ ಏಡನ್‌ ಮಾಕ್ರಮ್‌ 4 ಮತ್ತು ಇಂಗ್ಲೆಂಡ್‌ನ ಡೆವಿಡ್‌ ಮಲಾನ್‌ 5ನೇ ಸ್ಥಾನದಲ್ಲಿದ್ದಾರೆ.
ಬೌಲರ್‌ ಗಳ ಶ್ರೇಯಾಂಕದಲ್ಲಿ ಜೋಶ್ ಹೇಜಲ್‌ವುಡ್‌ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತರ್ಬೈಜ್‌ ಶಮ್ಸಿ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!