ಜ. 26ರಂದು ಬಿಡುಗಡೆಯಾಗಲಿದೆ ಭಾರತೀಯ ಮೊದಲ ‘ಇಂಟ್ರಾನಾಸಲ್’ ಕೋವಿಡ್ ಲಸಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ.26ರಂದು ಭಾರತದಲ್ಲಿ ಮೊದಲ ಬಾರಿಗೆ ಸ್ವದೇಶಿ ಲಸಿಕೆ ತಯಾರಕ ಭಾರತ್ ಬಯೋಟೆಕ್ (Bharat Biotech ) ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ ಕೊವಾಕ್ ( iNCOVACC) ಬಿಡುಗಡೆ ಮಾಡಲಿದೆ ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಿಳಿಸಿದ್ದಾರೆ.

ಭೋಪಾಲ್‌ನಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಜಾನುವಾರುಗಳಲ್ಲಿನ ಗಡ್ಡೆಯ ಚರ್ಮದ ಕಾಯಿಲೆಗೆ ಸ್ವದೇಶಿ ಲಸಿಕೆ, ಲುಂಪಿ-ಪ್ರೊವಾಕ್‌ಇಂಡ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಅದೇ ರೀತಿ ಜ.26 ರಂದು ಅಧಿಕೃತವಾಗಿ ನಮ್ಮ ಮೂಗಿನ ಲಸಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಎಲಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!