ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್‌ ಕೌಂಟರ್‌: ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಕಾಶ್ಮೀರದ ಮೂರು ಕಡೆಗಳಲ್ಲಿ ಪ್ರತ್ಯೇಕ ಎನ್‌ ಕೌಂಟರ್‌ ನಡೆದಿದ್ದು, ಇದರಲ್ಲಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಮ್ಮು ಅಧಿಕಾರಿಗಳು, ಕಳೆದ ರಾತ್ರಿಯಿಂದಲೇ ಜಮ್ಮು ಕಾಶ್ಮೀರದ ಪುಲ್ವಾಮಾ, ಗಂದೇರ್‌ ಬಾಲ್‌ ಮತ್ತು ಹಂದ್ವಾರಾದಲ್ಲಿ ಎನ್‌ ಕೌಂಟರ್‌ ನಡೆದಿದೆ.
ನಿನ್ನೆ ರಾತ್ರಿ ಇಬ್ಬರು ಉಗ್ರರನ್ನು ಹಾಗೂ ಇಂದು ಬೆಳಗ್ಗೆ ಇಬ್ಬರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ.
ಹತ್ಯೆಗೀಡಾದ ಈ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಜೈಷ್‌ ಇ ಮೊಹಮದ್‌ ಹಾಗೂ ಮತ್ತಿಬ್ಬರು ಲಷ್ಕರ್‌ ಇ ತೊಯ್ಬಾ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರೆಂದು ತಿಳಿದುಬಂದಿದೆ.
ಒಬ್ಬ ಭಯೋತ್ಪಾದನನ್ನು ಜೀವಂತವಾಗಿ ಬಂಧಿಸಲಾಗಿದೆ ಎಂದು ಕಾಶ್ಮೀರದ ಐಜಿಪಿ ತಿಳಿಸಿದ್ದಾರೆ.
ಇನ್ನೂ ಇಬ್ಬರು ಉಗ್ರರ ಪತ್ತೆಗಾಗಿ ಪೊಲೀಸ್‌ ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಶಂಕಿತ ಸ್ಥಳಗಳ ಸುತ್ತಮುತ್ತ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೆ ಕುಲ್ಗಾಂ ಜಿಲ್ಲೆಯ ಔಡೋರಾ ಪ್ರದೇಶದಲ್ಲಿ ಬಿಜೆಪಿಯ ಸರಪಂಚ್ ನನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!