ಪಾಕ್‌ ವಾಯುಪಡೆಗೆ ʼಮೇಡ್‌ ಇನ್‌ ಚೀನಾʼದ ಜೆ-10ಸಿ ಫೈಟರ್‌ ಜೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಖರೀದಿಸಿದ ರಫೇಲ್‌ ಯುದ್ಧ ವಿಮಾನಗಳ ಪ್ರತಿಯಾಗಿ ಬಳಸಲು ಪಾಕಿಸ್ತಾನ ಮೇಡ್‌ ಇನ್‌ ಚೀನಾದ ಜೆ-10ಸಿ ಫೈಟರ್‌ ಜೆಟ್‌ ಖರೀದಿಸಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿದೆ.
ಪಾಕಿಸ್ತಾನ ಸೇನೆ ತನ್ನ ಮಿತ್ರ ರಾಷ್ಟ್ರ ಚೀನಾದಿಂದ ಜೆ-10ಸಿ ಫೈಟರ್‌ ಜೆಟ್‌ ಅನ್ನು ಖರೀದಿಸಿರುವ ಬಗ್ಗೆ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಚೀನಾ ಯುದ್ಧವಿಮಾನಗಳು ಪಾಕ್‌ ಸೇನಾ ಪಡೆಗೆ ಸೇರ್ಪಡೆಗೊಂಡಿದ್ದು, ಭಾರತ ಫ್ರಾನ್ಸ್ ನಿಂದ ಖರೀದಿಸಿದ ರಫೇಲ್ ಯುದ್ಧವಿಮಾನದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು.
ಈ ಹೊಸ ಜೆಟ್‌ ನ ಸೇರ್ಪಡೆಯಿಂದ ಪಾಕ್ ಸೇನೆಗೆ ಬಲ ಬಂದಿದೆ ಎಂದರು.
ಪಾಕಿಸ್ತಾನ ವಾಯುಪಡೆ (ಪಿಎಎಫ್) ಬೇಸ್ ಮಿನ್ಹಾಸ್ ಕಮ್ರಾದಲ್ಲಿ ಹೊಸ ಜೆಟ್‌ಗಳು ಸೇರ್ಪಡೆಗೊಂಡಿದೆ.
ಈ ಹಿಂದೆ ಪಾಕಿಸ್ತಾನ ಅಮೆರಿಕದಿಂದ ಎಫ್-16ಎಸ್‌ ಅನ್ನು ಖರೀದಿಸಿ ಭಾರತದ ರಫೇಲ್‌ ಗೆ ಸಮವಾಗಲಿದೆ ಎಂದಿತ್ತು. ಆದರೆ ಈಗ ಪಾಕ್‌ ತನ್ನ ವಾಯುಸೇನೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಜೆ-10ಸಿ ಜೆಟ್‌ ಖರೀದಿಸಿದೆ.

ಏನಿದೆ ಈ ಜೆ-10 ಸಿ ಜೆಟ್‌ ನಲ್ಲಿ?

  • ಇದು ಸಂಪೂರ್ಣ ಏವಿಯಾನಿಕ್‌ ಮತ್ತು ಯುದ್ಧ ವ್ಯವಸ್ಥೆಗೆ ಬಳಸುವಂತಾಗಿದೆ.
  • ಇದರಲ್ಲಿ ದೊಡ್ಡದಾದ ಎಲೆಕ್ಟ್ರಾನಿಕ್‌ ಸ್ಕ್ಯಾನ್‌ ಅರೇ ರೆಡಾರ್‌ ಇದೆ.
  • ಇದು ಏರ್‌ ಟು ಏರ್‌ ಕ್ಷಿಪಣಿಗಳನ್ನು ನಾಲ್ನೇ ಜನರೇಷನ್‌ ನಲ್ಲಿ ಸಾಗಿಸಬಹುದು,
  • ಇದು ಪಾಕ್‌ ಹಾಗೂ ಚೀನಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಜೆಎಫ್-17‌ ಗಿಂತ ಶಕ್ತಿಶಾಲಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!