ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನಾಗಾರ್ಜುನ ನಟನೆಯ ಮುಂದಿನ ಚಿತ್ರ ದಿ ಘೋಸ್ಟ್ ನಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.
ನಿರ್ದೇಶಕ ಪ್ರವೇಣ್ ಸತ್ತಾರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಜಾಕ್ವೆಲಿನ್ ಆಯ್ಕೆಯಾಗಿದ್ದರು. ಆರಂಭದಲ್ಲಿ ಚಿತ್ರಕ್ಕೆ ಕಾಜಲ್ ನಾಯಕಿಯಾಗಿ ಆಯ್ಕೆಯಾಗಿದ್ದರು, ಆದರೆ ಈ ವರ್ಷ ಕಾಜಲ್ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಚಿತ್ರದಿಂದ ದೂರ ಉಳಿದಿದ್ದಾರೆ.
ಈಗ ಜಾಕ್ವೆಲಿನ್ ಕೂಡ ಚಿತ್ರದಿಂದ ಹೊರ ಬಂದಿದೆ ಎನ್ನಲಾಗಿದೆ. ವಿದೇಶದಲ್ಲಿ ಚಿತ್ರದ ಶೂಟಿಂಗ್ ಗೆ ಸಿದ್ಧತೆ ನಡೆದಿದೆ. ಆದರೆ ಈ ವೇಳೆಗೆ ನಾಯಕಿಯ ಬದಲಾವಣೆಯಾಗಿರುವುದು ಚಿತ್ರತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಆದರೂ ಈ ಬಗ್ಗೆ ನಿರ್ದೇಶಕರಾಗಲೀ, ಚಿತ್ರತಂಡವಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ.