ಸಾಮಾನ್ಯವಾಗಿ ರಾತ್ರಿ ಹೊತ್ತು ಹೂ ಕೀಳೋದಿಲ್ಲ. ಹೂವುಗಳನ್ನು ಕೀಳೋದೇನಿದ್ದರೂ ಹಗಲು ಮಾತ್ರ. ಆದರೆ ಹೀಗ್ಯಾಕೆ?
ಇಲ್ಲಿದೆ ಉತ್ತರ.. ಗಿಡಗಳು ಬೆಳಗ್ಗೆ ಹೊತ್ತು ಸೂರ್ಯನ ಬಿಸಿಲಿನಲ್ಲಿ ಆಹಾರ ತಯಾರಿಸಿಕೊಳ್ಳುತ್ತವೆ. ಅವರ ಕೆಲಸದ ಅವಧಿ ಹಗಲು ಮಾತ್ರ. ರಾತ್ರಿ ಸಮಯ ಕಿರಣಗಳ ಅಭಾವದಿಂದ ಗಿಡಗಳು ನೆಮ್ಮದಿಯಾಗಿ ನಿದ್ರಿಸುವಂತೆ. ಮಲಗಿರುವವರಿಗೆ ತೊಂದರೆ ಕೊಡೋದು ತಪ್ಪು ಎನ್ನುವುದು ಹಿರಿಯರ ನಂಬಿಕೆ.