ಬೆಲ್ಲದಲ್ಲಿದೆ ರೋಗ ನಿವಾರಕ ಗುಣಗಳು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಲ್ಲದಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳೋದು ಸತ್ಯ. ಶ್ವಾಸಕೋಶ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಒಳಗಿನಿಂದ ಶುದ್ಧೀಕರಿಸುವಲ್ಲಿ ಬೆಲ್ಲ ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದು ತುಂಡು ಬೆಲ್ಲವನ್ನು ಸೇವಿಸುವುದರಿಂದ ಇಡೀ ದೇಹವು ಶುದ್ಧವಾಗುತ್ತದೆ.ಎದೆಯುರಿ, ಅಸಿಡಿಟಿಯಂತಹ ಸಮಸ್ಯೆಗಳಿಂದ ಹೊರಬರಲು ಒಂದು ಚಿಕ್ಕ ಬೆಲ್ಲ ತಿಂದರೆ ಸಾಕು.

ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುವಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ಒಣ ಕೆಮ್ಮು, ಶೀತ ಮತ್ತು ಅಸ್ತಮಾ ಚಿಕಿತ್ಸೆಗಾಗಿ ಬೆಲ್ಲವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಬೆಲ್ಲವು ದೇಹದಲ್ಲಿನ ಅನೇಕ ಕಿಣ್ವಗಳನ್ನು ಅಸಿಟಿಕ್ ಆಮ್ಲವಾಗಿ ಪರಿವರ್ತಿಸುತ್ತದೆ, ಒಂದು ಲೋಟ ಬೆಲ್ಲದ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ತಣ್ಣಗಾಗಲು ಬಿಡಿ. ಈ ನೀರನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಶುಂಠಿ ಮತ್ತು ಬೆಲ್ಲವನ್ನು ಸಮಪ್ರಮಾಣದಲ್ಲಿ ಪ್ರತಿದಿನ ಸೇವಿಸುವುದರಿಂದ ಮೈ-ಕೈ ನೋವು ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಮೆಗ್ನೀಸಿಯಮ್ ರಕ್ತನಾಳಗಳು ಮತ್ತು ನರಮಂಡಲವನ್ನು ಬಲಪಡಿಸುತ್ತದೆ. ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೆ ಬೆಲ್ಲ ಮತ್ತು ತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!