ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಾಹನವೊಂದು ರಸ್ತೆಯಿಂದ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಸಾಂಬಾದಿಂದ ಶ್ರೀನಗರಕ್ಕೆ ಹೋಗುತ್ತಿದ್ದ (ಜೆಕೆ01 ಯು-2233) ನೋಂದಣಿಯ ಕಾರಿನಲ್ಲಿ ಆರುಮಂದಿ ಪ್ರಯಾಣಿಸುತ್ತಿದ್ದರು. ಸಾಂಬಾ ಜಿಲ್ಲೆಯ ಮನ್ಸಾರ್ ಬಳಿಯ ಜಮೋದಾ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಐದು ದೇಹಗಳನ್ನು ಕಮರಿಯಿಂದ ಹೊರತೆಗೆದ್ದಿದ್ದಾರೆ, ಇನ್ನೊರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತರನ್ನು ಗುಲ್ಜಾರ್ ಅಹ್ಮದ್ ಭಟ್ (71), ಪತ್ನಿ ಜೈನಾ ಬೇಗಂ (65), ಮಗ ಇಕ್ಬಾಲ್ ಅಹ್ಮದ್ ಭಟ್ (25) ಮಗಳು ಮಸರತ್ ಜಾನ್ (21) ಎಂದು ಗುರುತಿಸಲಾಗಿದೆ. ಚಾಲಕನನ್ನು ಅನಂತನಾಗ್ ನಿವಾಸಿ ಸಾಕಿಬ್ ಎಂದು ಗುರುತಿಸಲಾಗಿದೆ.