ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಸ್ ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಫಿನಾಲೆ ತಲುಪಿದೆ.
ಇಂದು ಕರ್ನಾಟಕ ತಂಡ ಒಡಿಶಾ ವಿರುದ್ಧ ಸೆಣೆಸಾಡಲಿದೆ. ನಿನ್ನೆ ಆಂಧ್ರದ ವಿರುದ್ಧ ನಡೆದ ಸೆಮಿಫಿನಾಲೆಯಲ್ಲಿ ಕರ್ನಾಟಕ 62 ರನ್ ಗಳಿಂದ ಗೆಲುವು ಸಾಧಿಸಿದೆ. 15 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಆಂಧ್ರ ಪ್ರದೇಶ ತಂಡ 15 ಓವರ್ ಗಳು ಮುಕ್ತಾಯಗೊಂಡಾಗ 2 ವಿಕೆಟ್ ನಷ್ಟಕ್ಕೆ 99 ರನ್ ಮಾತ್ರ ಗಳಿಸಿತು.