ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ದಿನದಾಟದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದಾರೆ.
ಟೆಸ್ಟ್ ಪಂದ್ಯದ ಮೊದಲ ದಿನ 45 ರನ್ ಗಳಿಸಿ ಅಜೇಯರಾಗಿದ್ದ ರವೀಂದ್ರ ಜಡೇಜಾ ಇಂದು ಅದೇ ಬಿರುಸಿನೊಂದಿಗೆ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಜಡೇಜಾ ಅವರ ಟೆಸ್ಟ್ ವೃತ್ತಿ ಜೀವನದಲ್ಲಿ ಎರಡನೇ ಶತಕ ಬಾರಿಸಿದ್ದಾರೆ. ಶ್ರೀಲಂಕನ್ ರ 160 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಅದರಲ್ಲಿ 10 ಬೌಂಡರಿ ಬಾರಿಸಿದ್ದಾರೆ.
ಇಂದಿನ ಟೆಸ್ಟ್ ನಲ್ಲಿ ಆರಂಭಿಕ ಜೊತೆಯಾಟ ನಡೆಸಿದ ಜಡೇಜಾ ಹಾಗೂ ಅಶ್ವಿನ್ 130 ರನ್ ಗಳಿಸಿದರು. ಇನ್ನು ಅಶ್ವಿನ್ 61 ರನ್ ಗಳಿಸಿ ಲಕ್ಮಲ್ ಅವರ ಎಸೆತಕ್ಕೆ ಔಟಾದರು.
ಪ್ರಸ್ತುತ ಟೀಂ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿದೆ.