April 27, 2026
Monday, April 27, 2026
spot_img

ಉಗ್ರರ ಜೊತೆ ನಂಟು ಆರೋಪ: ಇಸ್ಲಾಮಿಕ್ ಸಂಘಟನೆಗೆ ನಿಷೇಧ ಹೇರಿದ ಜಮ್ಮು-ಕಾಶ್ಮೀರ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ ಆರೋಪದಡಿ ಜಾಮಿಯಾ ಸಿರಾಜುಲ್​ ಉಲೂಮ್​ ಎಂಬ ಇಸ್ಲಾಮಿಕ್ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ನಿಷೇಧಿಸಿದೆ.

ಇಲ್ಲಿನ ಶೋಪಿಯಾನ್​ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಸಂಘಟನೆಯು ಅಕ್ರಮ ಹಣ ವರ್ಗಾವಣೆ, ಕಾನೂನುಗಳ ದುರುಪಯೋಗ ಮಾಡುತ್ತಿದ್ದರು. ಈ ಸಂಬಂಧ ಯುಎಪಿಎ ಸೆಕ್ಷನ್ 8(1) ರ ಅಡಿಯಲ್ಲಿ ನಿಷೇಧಿಸಲು ವಿಭಾಗೀಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಿಷೇಧಿತ ಸಂಘಟನೆ ಜಮಾತ್-ಎ-ಇಸ್ಲಾಮಿ (ಜೆಇ) ಯೊಂದಿಗೆ ರಹಸ್ಯ ಸಂಪರ್ಕ ಹೊಂದಿದ್ದು, ಜೊತೆಗೆ ಈ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಆಡಳಿತ ಮತ್ತು ಬೋಧನಾ ಸ್ಥಳಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಇತ್ತ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ , ಸರಕಾರದ ಈ ನಿರ್ಧಾರವನ್ನು ಟೀಕಿಸಿದ್ದು, ಜಾಮಿಯಾ ಸಿರಾಜ್ ಉಲೂಮ್ ಸಂಘಟನೆಯನ್ನು ಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸುವುದು ಸಮಾಜದ ಬಡ ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯ ಎಂದು ಕರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !